-->
ಬಜಪೆ:ಪ್ರತಿಭಾ ಪುರಸ್ಕಾರ ಹಾಗೂ ಗೌರವಾರ್ಪಣೆ ಕಾರ್ಯಕ್ರಮ

ಬಜಪೆ:ಪ್ರತಿಭಾ ಪುರಸ್ಕಾರ ಹಾಗೂ ಗೌರವಾರ್ಪಣೆ ಕಾರ್ಯಕ್ರಮ

ಬಜಪೆ:ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ವತಿಯಿಂದ ಸೋಮವಾರದಂದು ಬ್ಯಾಂಕ್ ನ ಸಭಾಭವನದಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಗೌರವಾರ್ಪಣೆ ಕಾರ್ಯಕ್ರಮವು ನಡೆಯಿತು. 
ಕಾರ್ಯಕ್ರಮದಲ್ಲಿ ಬ್ಯಾಂಕ್ ನ ವ್ಯಾಪ್ತಿಯ 4 ಪದವಿ ಪೂರ್ವ ಕಾಲೇಜು,13 ಪ್ರೌಢಶಾಲೆ,ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳನ್ನು ಗಳಿಸಿದ 40  ವಿದ್ಯಾರ್ಥಿಗಳಿಗೆ ಸಹಾಯಧನ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.ಉನ್ನತ ಶಿಕ್ಷಣ ಪಡೆದ 4 ಮಂದಿ ವಿದ್ಯಾರ್ಥಿಗಳನ್ನು ಈ ಸಂದರ್ಭ ಅಭಿನಂದಿಸಲಾಯಿತು.

ಈ ಸಂದರ್ಭ  ವೇದಿಕೆಯಲ್ಲಿ ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ  ಡೆನ್ನಿಸ್  ಡಿ ಸೋಜ,ಉಪಾಧ್ಯಕ್ಷ ಭಾಸ್ಕರ ಮಲ್ಲಿ,ನಿರ್ದೇಶಕ ರತ್ನಾಕರ ಶೆಟ್ಟಿ,ವಸಂತ,ಸ್ಟೇನಿ  ಡಿ ಸೋಜಾ ರಿತೇಶ್ ಶೆಟ್ಟಿ ,ಮಹಮ್ಮದ್ ಶರೀಫ್,ಗೀತಾ ಕೆ ಅಮೀನ್ ,ಸವಿತಾ,ಮೀರಾ,ವೃತ್ತಿಪರ ನಿರ್ದೇಶಕ  ಮೋಹನ್ ಪೂಜಾರಿ ಕಬೆತ್ತಿಗುತ್ತು,ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಪ್ರತಿನಿಧಿ ಕಿರಣ್ ಕುಮಾರ್ ಶೆಟ್ಟಿ  ಇದ್ದರು.ರಾಜೇಂದ್ರ ಪ್ರಸಾದ್ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು.ಬ್ಯಾಂಕ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೆಸಿಲ್ಲಾ ಪಿರೇರಾ ಧನ್ಯವಾದವಿತ್ತರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ