ದಿ. ಸುಹಾಸ್ ಶೆಟ್ಟಿ ಸ್ಮರಣಾರ್ಥ ರಕ್ತದಾನ ಶಿಬಿರ ಹಾಗೂ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ
Tuesday, July 22, 2025
ಬಜಪೆ : ವಿಶ್ವ ಹಿಂದೂ ಪರಿಷತ್ ಬಜರಂಗದಳ ಮಾತೃಶಕ್ತಿ, ದುರ್ಗಾವಾಹಿನಿ ವಜ್ರದೇಹಿ ಘಟಕ ಗುರುಪುರ ಹಾಗೂ ಎಜೆ ವೈದ್ಯಕೀಯ ಮಹಾ ವಿದ್ಯಾಲಯ ಆಸ್ಪತ್ರೆ ಮಂಗಳೂರು ಇವರ ಸಹಯೋಗದಲ್ಲಿ ದಿ. ಸುಹಾಸ್ ಶೆಟ್ಟಿ ಸ್ಮರಣಾರ್ಥ ಜು. 20ರಂದು ಗುರುಪುರ ಕುಕ್ಕುದಕಟ್ಟೆಯ ಖಾಸಗಿ ಸಭಾಗೃಹದಲ್ಲಿ ರಕ್ತದಾನ ಶಿಬಿರ ಹಾಗೂ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಅವರು ಶಿಬಿರ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ದೀಪ ಬೆಳಗಿಸಿ ಉದ್ಘಾಟಿಸಲಾದ ಕಾರ್ಯಕ್ರಮದಲ್ಲಿ ಮೂಳೂರು ಶ್ರೀ ವೈದ್ಯನಾಥ ದೈವಸ್ಥಾನದ ಮುಂಡಿತ್ತಾಯ ಪಾತ್ರಿ ಚಂದ್ರಹಾಸ ಪೂಜಾರಿ ಕೌಡೂರು, ಗುರುಪುರ ಮಂಡಲ ಪ್ರಮುಖ ಸತೀಶ್ ಕಾವ, ಜಿಲ್ಲಾ ಸೇವಾ ಪ್ರಮುಖ್ ದೀಪಕ್ ಮರೋಳಿ, ಪ್ರಖಂಡ ಕಾರ್ಯದರ್ಶಿ ದಿನೇಶ್ ಮಿಜಾರು, ಪ್ರಖಂಡ ಸೇವಾ ಪ್ರಮುಖ್ ನವೀನ್ ಆದ್ಯಪಾಡಿ, ಎಜೆ ಆಸ್ಪತ್ರೆಯ ವೈದ್ಯರಾದ ಡಾ. ಶಿಶಿರ್, ಡಾ. ರೇಷ್ಮಾ ಮತ್ತು ಬ್ಲಡ್ ಬ್ಯಾಂಕ್ ಮ್ಯಾನೇಜರ್ ಗೋಪಾಲಕೃಷ್ಣ, ಗುರುಪುರ ಘಟಕದ ಅಧ್ಯಕ್ಷ ನಾಗೇಶ್ ಕೊಟ್ಟಾರಿ, ಕಾರ್ಯದರ್ಶಿ ಸುರೇಂದ್ರ, ಸಂಚಾಲಕ ಹೇಮಚಂದ್ರ, ಮಾತ್ರಮಂಡಳಿ ಅಧ್ಯಕ್ಷೆ ಹೇಮಾ, ಗುರುಪುರ ಪಂಚಾಯತ್ ಸದಸ್ಯರಾದ ಜಿ. ಎಂ. ಉದಯ ಭಟ್, ಸಚಿನ್ ಅಡಪ, ಸುನಿಲ್ ಜಲ್ಲಿಗುಡ್ಡೆ, ರಾಜೇಶ್ ಸುವರ್ಣ, ನಳಿನಿ ಶೆಟ್ಟಿ, ಬಿಜೆಪಿ ಮುಖಂಡರಾದ ಪುರಂದರ ಮಲ್ಲಿ, ಶ್ರೀಕರ ಶೆಟ್ಟಿ, ಶಾಮರಾಯ ಆಚಾರ್ಯ, ಹಿಂದೂ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕಾರ್ಯತರ್ಕರು ಉಪಸ್ಥಿತರಿದ್ದರು. ಜಿಲ್ಲಾ ಸತ್ಸಂಗ ಪ್ರಮುಖ್ ವಸಂತ ಸುವರ್ಣ ನಿರೂಪಿಸಿದರು.
ಶಿಬಿರದಲ್ಲಿ ಸಾಮಾನ್ಯ ಆರೋಗ್ಯ ತಪಾಸಣೆ, ಕಿವಿ-ಮೂಗು-ಗಂಟಲು ತಪಾಸಣೆ, ದಂತ ಚಿಕಿತ್ಸೆ, ಚರ್ಮರೋಗ ತಪಾಸಣೆ, ಕಣ್ಣಿನ ತಪಾಸಣೆ(ಕನ್ನಡಕ ವಿತರಣೆ), ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆ, ಮಧುಮೇಹ ಹಾಗೂ ರಕ್ತದೊತ್ತಡ ಪರೀಕ್ಷೆ, ಹೃದಯ ಸಂಬಂಧಿ ರೋಗ ತಪಾಸಣೆ(ಇಸಿಜಿ) ವ್ಯವಸ್ಥೆಗೊಳಿಸಲಾಗಿತ್ತು. ರಕ್ತದಾನ ಶಿಬಿರದಲ್ಲಿ 50ಕ್ಕೂ ಹೆಚ್ಚು ಯುವಜನರು ರಕ್ತದಾನ ಮಾಡಿದರೆ, ಹಲವು ಮಕ್ಕಳಿಂದ ವಯೋವೃದ್ಧರು ಸಾಮಾನ್ಯ ರೋಗ ತಪಾಸಣೆ, ಕಣ್ಣಿನ ಪರೀಕ್ಷೆಯ ಸದುಪಯೋಗ ಪಡೆದುಕೊಂಡರು.