ಬ್ಯಾಂಕ್ ಆಫ್ ಬರೋಡ ಬಜಪೆ ಶಾಖೆ ವತಿಯಿಂದ ಬಡಗ ಎಕ್ಕಾರು ಸರಕಾರಿ ಪ್ರೌಢಶಾಲೆಗೆ ಸ್ಮಾರ್ಟ್ ಟಿವಿ ಹಸ್ತಾಂತರ
Tuesday, July 22, 2025
ಬಜಪೆ:ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರು ಮಂಗಳೂರು ಉತ್ತರ ಇಲ್ಲಿಗೆ ಬ್ಯಾಂಕ್ ಆಫ್ ಬರೋಡ ಬಜಪೆ ಶಾಖೆ ವತಿಯಿಂದ ತಮ್ಮ ಸಿ ಎಸ್ ಆರ್ ನಿಧಿಯಿಂದ ತಂತ್ರಜ್ಞಾನ ಆಧಾರಿತ ಬೋಧನೆಗೆ ಪೂರಕವಾಗುವಂತೆ ಸುಮಾರು 10000 ರೂಪಾಯಿ ಮೌಲ್ಯದ ಸ್ಮಾರ್ಟ್ ಟಿವಿಯನ್ನು ಶಾಲೆಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಶಾಖ ಪ್ರಬಂಧಕ ಎಸ್ ಪ್ರಸಾದ್, ಆಫೀಸರ್ ವೀಣಾ, ಕಚೇರಿ ಸಿಬ್ಬಂದಿ ಶ್ರೀಮತಿ ಸವಿತಾ, ಕ್ಷೇತ್ರ ಸಂಪನ್ಮೂಲ ಕೇಂದ್ರ ಮಂಗಳೂರಿನ ಆಪ್ತ ಸಲಹೆಗಾರ ಶ್ರೀಮತಿ ಮೇವಿಸ್ ಮತ್ತು ಸಂಸ್ಥೆಯ ಶಿಕ್ಷಕರು ಉಪಸ್ಥಿತರಿದ್ದರು.