ಕಾಟಿಪಳ್ಳ ಲಯನ್ಸ್ ಕ್ಲಬ್ ನಿಂದ ಪ್ರತಿಭಾ ಕುಳಾಯಿಗೆ ಅಭಿನಂದನೆ
Thursday, July 24, 2025
ಕಾಟಿಪಳ್ಳ:ಕರ್ನಾಟಕ ರಾಜ್ಯ ಹಿಂದುಳಿದ ಆಯೋಗದ ಸದಸ್ಯೆಯಾಗಿ ಕರ್ನಾಟಕ ಸರಕಾರದಿಂದ ನಿಯುಕ್ತಿಗೊಂಡ ಮಂಗಳೂರು ಮಹಾನಗರ ಪಾಲಿಕೆ ಮಾಜಿ ಸದಸ್ಯೆ, ಸಮಾಜಸೇವಕಿ ಪ್ರತಿಭಾ ಕುಳಾಯಿ ಇವರನ್ನು ಲಯನ್ಸ್ ಕ್ಲಬ್ ಕಾಟಿಪಳ್ಳ_ ಕೃಷ್ಣಾಪುರ ವತಿಯಿಂದ ಅಭಿನಂದಿಸಲಾಯಿತು.
ಇತ್ತೀಚೆಗೆ ಸುರತ್ಕಲ್ ಲಯನ್ಸ್ ಸೆಂಟರ್ ನಲ್ಲಿ, ಲಯನ್ಸ್ ಕ್ಲಬ್ ಕಾಟಿಪಳ್ಳ_ ಕೃಷಾಪುರ, ಲಯನ್ಸ್ ಕ್ಲಬ್ ಕಟೀಲು_ ಎಕ್ಕಾರು, ಲಯನ್ಸ್ ಕ್ಲಬ್ ಕರ್ನಿರೆ_ ಬಳಕುಂಜೆ ಕ್ಲಬ್ ಗಳ 2025-26 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ, ಪದಗ್ರಹಣ ಅಧಿಕಾರ ಲಯನ್ಸ್ ಜಿಲ್ಲಾ ದ್ವಿತೀಯ ರಾಜ್ಯಪಾಲರಾದ ಲಯನ್ ಗೋವರ್ಧನ ಶೆಟ್ಟಿ ಮತ್ತು ಸುಪ್ರೀತಾ ಜಿ. ಶೆಟ್ಟಿ ದಂಪತಿಗಳು ಪ್ರತಿಭಾ ಅವರಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಅಭಿನಂದಿಸಿದರು.
ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ಮೆಲ್ವಿನ್ ಡಿಸೋಜ, ಲಯನ್ಸ್ ಪ್ರಾಂತ್ಯ ಅಧ್ಯಕ್ಷ ಮಾಧವ ಶೆಟ್ಟಿ, ವಲಯ ಅಧ್ಯಕ್ಷರುಗಳಾದ ರೋಲ್ಪಿ ಡಿಕೊಸ್ಟ, ಅರುಣ್ ಕುಮಾರ್ ಶೆಟ್ಟಿ, ಕಾಟಿಪಳ್ಳ ಲಯನ್ಸ್ ಕ್ಲಬ್ ನ ನಿಕಟ ಪೂರ್ವ ಅಧ್ಯಕ್ಷ ದೀಪಕ್ ಪೆರ್ಮುದೆ, ನಿರ್ಗಮನ ಅಧ್ಯಕ್ಷ ಗಣೇಶ ಶೆಟ್ಟಿ, ನೂತನ ಅಧ್ಯಕ್ಷ ಲೋಕೇಶ್ ಕುರುವನ, ಶೇಖರ್ ಶೆಟ್ಟಿ ಎಕ್ಕಾರು, ಚಂದ್ರಶೇಖರ್ ಐಕಳ, ಪ್ರಭಾಕರ ಶೆಟ್ಟಿ ಕರ್ನಿರೆ, ನೆಲ್ಸನ್ ಲೋಬೊ ಬಳಕುಂಜೆ , ಕಾರ್ಯದರ್ಶಿ ವಿನೋದ್ ಕುಮಾರ್, ಕೋಶಾಧಿಕಾರಿ ಆನಂದ ಅಮೀನ್, ಮಾಜಿ ಅಧ್ಯಕ್ಷರುಗಳಾದ ಸಂಜೀವ ಎಂ. ಶೆಟ್ಟಿ, ಉಮಾನಾಥ ಅಮೀನ್, ವಿಶ್ವನಾಥ್ ಭಂಡಾರಿ, ಶಿವಪ್ರಸಾದ್ ಬಾಳ, ರಾಜಾರಾಮ್ ಸಾಲ್ಯಾನ್, ದಯಾಕರ್ ಸುವರ್ಣ, ಪ್ರಶಾಂತ್ ಶೆಟ್ಟಿ, ಪ್ರಮೀಳಾ ದೀಪಕ್ ಪೆರ್ಮುದೆ ಮೊದಲಾದವರು ಉಪಸ್ಥಿತರಿದ್ದರು