ಆರೋಗ್ಯಕರ ಜೀವನ ನಡೆಸಲು ಆರೋಗ್ಯ ತಪಾಸಣೆ ಅತಿ ಮುಖ್ಯ - ಸ್ಟ್ಯಾನೀ ಪಿಂಟೋ
Friday, July 25, 2025
ಕಟೀಲು:ಆರೋಗ್ಯಕರ ಜೀವನವನ್ನು ನಡೆಸಲು ಆರೋಗ್ಯ ತಪಾಸಣೆ ಅತಿ ಮುಖ್ಯ ಎಂದು ಸಮಾಜಸೇವಕ ಸ್ಟ್ಯಾನಿ ಪಿಂಟೋ ಹೇಳಿದರು.ಅವರು ಉಲ್ಲಂಜೆ ಶ್ರೀ ಕ್ಷೇತ್ರ ಕೊರಗಜ್ಜ ಮಂತ್ರ ದೇವತಾ ಸನ್ನಿಧಾನದ ವಠಾರದಲ್ಲಿ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ, ರೋಟರಿ ಕ್ಲಬ್ ಕಿನ್ನಿಗೋಳಿ ,ಜನನಿ ಜನ ಸೇವಾ ಸಂಸ್ಥೆ ಉಲ್ಲಂಜೆ, ಇನ್ನರ್ ವೀಲ್ ಕ್ಲಬ್ ಕಿನ್ನಿಗೋಳಿ ಇವರ ಜಂಟಿ ಆಶ್ರಯದಲ್ಲಿ ನಡೆದ ಉಚಿತ ಆರೋಗ್ಯ ಶಿಬಿರದಲ್ಲಿ ಮಾತನಾಡಿದರು.
ಕೊಡೆತ್ತೂರು ದೇವಸ್ಯ ಮಠದ ವೇದವ್ಯಾಸ ಉಡುಪ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಉಲ್ಲಂಜೆ ಕ್ಷೇತ್ರದ ಧರ್ಮದರ್ಶಿ, ಹರೀಶ್ ಪೂಜಾರಿ ,ಸಮಾಜ ಸೇವಕ ಸ್ಟ್ಯಾನಿ ಪಿಂಟೋ, ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕಿ ಶ್ರೀಮತಿ ತನುಜಾ ಶೆಟ್ಟಿ, ಬರ್ಕೆ ಫ್ರೆಂಡ್ಸ್ ನ ಅಧ್ಯಕ್ಷ ಪ್ರೇಮ್ ರಾಜ್ ಶೆಟ್ಟಿ, ಆಶ್ರಯ ಸಮಿತಿ ಸದಸ್ಯ ನವೀನ್ ಕುಮಾರ್ ಕಟೀಲು, ಇನ್ನರ್ ವೀಲ್ ಅಧ್ಯಕ್ಷೆ ಶ್ರೀಮತಿ ರೇಖಾ ರಘುರಾಮ ಶೆಟ್ಟಿ, ರೋಟರಿ ಕ್ಲಬ್ ಕಿನ್ನಿಗೋಳಿಯ ಮಾಜಿ ಸಹಾಯಕ ಗವರ್ನರ್ ರೊ.ಶರತ್ ಶೆಟ್ಟಿ ಡಾ. ಕೌಶಿಕ್, ಕಿನ್ನಿಗೋಳಿ ರೋಟರಿ ಕ್ಲಬ್ಬಿನ ಅಧ್ಯಕ್ಷ ಸಾಯಿನಾಥ ಶೆಟ್ಟಿ, ರೋಟರಿ ಕ್ಲಬ್ಬಿನ ಸದಸ್ಯರಾದ ಮಮತಾ ಶರತ್ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ, ಹರೀಶ್ ಶೆಟ್ಟಿ ನವೀನ್ ಕುಲಾಲ್, ಗಿರೀಶ್ ಮಡಿವಾಳ ,ಯಶೋಧರ ಕುಲಾಲ್, ದೀಕ್ಷಿತ್, ಸೌಮ್ಯ ,ಪ್ರತ್ವಿ ಉಲ್ಲಂಜೆ, ಪ್ರಮೀಳಾ ಉಲ್ಲಂಜೆ ಮತ್ತಿತರರಿದ್ದರು. ಸಂಘಟಕ ಪ್ರಕಾಶ್ ಕಿನ್ನಿ ಗೋಳಿ ಸ್ವಾಗತಿಸಿದರು. ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.