ಕಾಟಿಪಳ್ಳ ಲಯನ್ಸ್ ಕ್ಲಬ್ ಗೆ "ಉತ್ತಮ ಕ್ಲಬ್" ಪ್ರಶಸ್ತಿ
Tuesday, July 22, 2025
ಕಾಟಿಪಳ್ಳ:ಅಂತರ:ರಾಷ್ಟ್ರೀಯ ಲಯನ್ಸ್ ಸಂಸ್ಥೆ ಜಿಲ್ಲೆ 317 ಡಿ, 2024- 25 ನೇ ಸಾಲಿಗೆ 20 ವರ್ಷಗಳ ಒಳಗಿನ ಕ್ಲಬ್ ಗಳಿಗೆ ಕೊಡಲ್ಪಡುವ ಉತ್ತಮ ಕ್ಲಬ್ ಪ್ರಶಸ್ತಿ ಗಳ ಸಾಲಿನಲ್ಲಿ 8 ನೇ ಅತ್ಯುತ್ತಮ ಕ್ಲಬ್ ಪ್ರಶಸ್ತಿ ಯನ್ನು ಕಾಟಿಪಳ್ಳ ಕೃಷ್ಣಾಪುರ ಕ್ಲಬ್ ಪಡೆದುಕೊಂಡಿದೆ.
ವಾಮಂಜೂರು ಚರ್ಚ್ ಹಾಲ್ ನಲ್ಲಿ ಲಯನ್ಸ್ ಜಿಲ್ಲಾ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಜಿಲ್ಲಾ ಗವರ್ನರ್ ಬಿ. ಎಂ. ಭಾರತಿ ಅವರು ಪ್ರಶಸ್ತಿ ಪ್ರಧಾನ ಮಾಡಿದರು.
ಕಾಟಿಪಳ್ಳ ಲಯನ್ಸ್ ಕ್ಲಬ್ ನ 19 ವರ್ಷದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಇಂತಹ ಪ್ರಶಸ್ತಿ ಲಭಿಸುವುದಾಗಿದೆ.
ಕ್ಲಬ್ ನ ಕಾರ್ಯದರ್ಶಿ ಶೆರಿಲ್ ಪಿಂಟೋ ಅವರಿಗೆ ಉತ್ತಮ ಕಾರ್ಯದರ್ಶಿ ಪ್ರಶಸ್ತಿಯ ಜೊತೆಗೆ ಎಂಬ್ರೆಸ್ ಸರ್ವಿಸ್ ಎಂಪವರ್ ವೈಯಕ್ತಿಕ ಪ್ರಶಸ್ತಿ ಪಡಕೊಂಡಿದ್ದಾರೆ.
ಕ್ಲಬ್ ನ ಅಧ್ಯಕ್ಷ ಗಣೇಶ ಶೆಟ್ಟಿ, ಕೋಶಾಧಿಕಾರಿ ಲೋಕೇಶ್ ಕುರುವನ್ , ನಿಕಟಪೂರ್ವ ಅಧ್ಯಕ್ಷ ದೀಪಕ್ ಪೆರ್ಮುದೆ, ಸೇವಾ ಚಟುವಟಿಕೆ ಗಳ ಸಂಯೋಜಕ ಸಜೆಸ್ ಎಸ್. ಜೆ., ನೂತನ ಕಾರ್ಯದರ್ಶಿ ವಿನೋದ್ ಕುಮಾರ್, ನೂತನ ಕೋಶಾಧಿಕಾರಿ ಆನಂದ ಅಮೀನ್, ಮಾಜಿ ಅಧ್ಯಕ್ಷರುಗಳಾದ ಶಿವಪ್ರಸಾದ್ ಬಾಳ, ಉಮಾನಾಥ ಅಮೀನ್, ವಿಶ್ವನಾಥ್ ಭಂಡಾರಿ, ಸದಸ್ಯರುಗಳಾದ ಸೌಮ್ಯ ಶೆಟ್ಟಿ, ಕಿಶೋರ್ ಶೆಟ್ಟಿ, ಜೀವನ ರಾಜ್ ಮೊದಲಾದವರು ಉಪಸ್ಥಿತರಿದ್ದು, ಪ್ರಶಸ್ತಿ ಸ್ವೀಕರಿಸಿದರು.