ಎಕ್ಕಾರು ಲ.ಶೇಖರ್ ಶೆಟ್ಟಿ ಯವರಿಗೆ ಲಯನ್ಸ್ ಕ್ಲಬ್ ನಿಂದ ಸನ್ಮಾನ
Tuesday, July 22, 2025
ಬಜಪೆ:ಕಟೀಲ್ ಎಕ್ಕಾರು ಲಯನ್ಸ್ ಕ್ಲಬ್ ನ ಎರಡು ಅವಧಿಗೆ ಅಧ್ಯಕ್ಷರಾಗಿ, ಸೇವೆ ಮತ್ತು ಆಡಳಿತಾತ್ಮಕ ಚಟುವಟಿಕೆಗಳಲ್ಲಿ ತನ್ನ ಕ್ಲಬ್ ನ್ನು ಅಂತರಾಷ್ಟ್ರೀಯ ಲಯನ್ಸ್ ಜಿಲ್ಲೆ 317 ಡಿ ರ ಅಗ್ರಗಣ್ಯ ಕ್ಲಬ್ ಗಳ ಸಾಲಿಗೆ ಸೇರಿಸಿ, ಪ್ರತಿಷ್ಠಿತ ಉತ್ತಮ ಕ್ಲಬ್ ಪ್ರಶಸ್ತಿ ಪುರಸ್ಕಾರಗೊಂಡ ಸಲುವಾಗಿ, ಪ್ರಸಕ್ತ ವರ್ಷಕ್ಕೆ ನಿರ್ಗಮನ ಅಧ್ಯಕ್ಷ ಶೇಖರ ಶೆಟ್ಟಿ ಎಕ್ಕಾರು ಅವರನ್ನು ಲಯನ್ಸ್ ಕ್ಲಬ್ ಕಾಟಿಪಳ್ಳ ಕೃಷ್ಣಾಪುರ, ಲಯನ್ಸ್ ಕ್ಲಬ್ ಕಟೀಲ್ ಎಕ್ಕಾರು, ಲಯನ್ಸ್ ಕ್ಲಬ್ ಕರ್ನಿರೆ ಬಳಕುಂಜೆ ಗಳ 2025 - 26 ರ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಲಯನ್ಸ್ ಜಿಲ್ಲಾ ದ್ವಿತೀಯ ಉಪರಾಜ್ಯಪಾಲ ಗೋವರ್ಧನ ಶೆಟ್ಟಿ ಅವರು ಪದಗ್ರಹಣ ನಡೆಸಿಕೊಟ್ಟರು.
ನೂತನ ಅಧ್ಯಕ್ಷರುಗಳಾಗಿ ಚಂದ್ರಶೇಖರ್ ಐಕಳ, ಲೋಕೇಶ್ ಕುರುವನ್ ಪ್ರಭಾಕರ ಶೆಟ್ಟಿ, ಕಾರ್ಯದರ್ಶಿಗಳಾಗಿ ಅನುಪಮ ಶೆಟ್ಟಿ, ವಿನೋದ್ ಕುಮಾರ್, ಪ್ರಶಾಂತ್ ಶೆಟ್ಟಿ, ಕೋಶಾಧಿಕಾರಿಗಳಾಗಿ ದಯಾನಂದ ರೈ, ಆನಂದ ಅಮೀನ್, ನೆಲ್ಸನ್ ಲೋಬೊ ಅದಿಕಾರ ವಹಿಸಿಕೊಂಡರು.
ಲಯನ್ಸ್ ಪ್ರಾಂತ ಅಧ್ಯಕ್ಷ ಮಾಧವ ಶೆಟ್ಟಿ, ವಲಯ ಅಧ್ಯಕ್ಷರುಗಳಾದ ಅರುಣ್ ಕುಮಾರ್ ಶೆಟ್ಟಿ ಹಳೆಯಂಗಡಿ, ರೋಲ್ಪಿ ಡಿಕೊಸ್ಟ ಮುಲ್ಕಿ, ಮಾಜಿ ಗವರ್ನರ್ ಮೆಲ್ವಿನ್ ಡಿಸೋಜ, ಕಟೀಲು ಎಕ್ಕಾರು ಲಯನ್ಸ್ ಕ್ಲಬ್ ನ ಕಾರ್ಯದರ್ಶಿ ಸಂತೋಷ್ ಆಳ್ವಾ, ಕೋಶಾಧಿಕಾರಿ ಅನುಪಮ ಶೆಟ್ಟಿ, ಉಪಾಧ್ಯಕ್ಷ ಗಂಗಾಧರ ಅಮೀನ್, ಸದಸ್ಯರುಗಳಾದ ಚಂದ್ರಹಾಸ ಶೆಟ್ಟಿ, ಪೂನಂ ಶೆಟ್ಟಿ, ರೊನಾಲ್ಡ್ ಫರ್ನಾಂಡಿಸ್, ಪ್ರದೀಪ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.