ಹೆದ್ದಾರಿಯಲ್ಲಿನ ಹೊಂಡ ಮುಚ್ಚಿದ ರಿಕ್ಷಾ ಚಾಲಕರು
Tuesday, July 22, 2025
ಬಜಪೆ:ಕಟೀಲು -ಬಜಪೆ ರಾಜ್ಯ ಹೆದ್ದಾರಿ 67 ರ ಕಟೀಲು ಹಾಗೂ ಎಕ್ಕಾರಿನಲ್ಲಿ ಹೆದ್ದಾರಿಯಲ್ಲಿ ಅಲ್ಲಲ್ಲಿ ಹೊಂಡಗಳು ಉಂಟಾಗಿದ್ದು,ವಾಹನಗಳ ಸವಾರರಿಗೆ ಆಪಾಯಕಾರಿಯಾಗಿ ಪರಿಣಮಿಸಿತ್ತು. ಎಕ್ಕಾರಿನ ಕುಂಭಕಂಠಿಣಿ ಆಟೋ ಚಾಲಕರುಗಳು ಸೇರಿ ಹೆದ್ದಾರಿಯಲ್ಲಿನ ಹೊಂಡಗಳನ್ನು ತಾತ್ಕಲಿಕವಾಗಿ ಮುಚ್ಚುವಂತಹ ಕಾರ್ಯವನ್ನು ಮಾಡಿದ್ದಾರೆ.ವಾಹನಿಗರಿಗೆ ಆಪಾಯಕಾರಿಯಾಗಿ ಪರಿಣಮಿಸುತ್ತಿದ್ದ ಹೊಂಡಗಳನ್ನು ಮುಚ್ಚುವ ಸಮಾಜಮುಖಿ ಕಾರ್ಯವನ್ನು ಮಾಡಿದ ಆಟೋ ಚಾಲಕರುಗಳಿಗೆ ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ.