ಶ್ರೀ ರಜಕ ಸಮಾಜ ಸೇವಾ ಸಂಘ ,ಆಟಿಡೊಂಜಿ ದಿನ ಕಾರ್ಯಕ್ರಮ
Monday, July 28, 2025
ಕಟೀಲು:ಶ್ರೀ ರಜಕ ಸಮಾಜ ಸೇವಾ ಸಂಘ ಮೂಲ್ಕಿ ತಾಲೂಕು, ಮಂಗಳೂರು ಮತ್ತು ಕರ್ನಾಟಕ ರಾಜ್ಯ ಮಡಿವಾಳರ ಸಮಾಜ ಸೇವಾ ಸಂಘ ಮುಲ್ಕಿ ತಾಲೂಕು ಘಟಕ ಜಂಟಿ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಮಡಿವಾಳರ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕಟೀಲು ಸಂಜೀವ ಮಡಿವಾಳರ ಸಭಾ ಅಧ್ಯಕ್ಷತೆಯಲ್ಲಿ ಸರ್ವ ಸದಸ್ಯರ ಸಭೆ ಮತ್ತು ಆಟಿ ಡೊಂಜಿ ದಿನ ಕಾರ್ಯಕ್ರಮವು ಕಟೀಲು ಬ್ರಾಹ್ಮರಿ ಸಭಾಂಗಣದಲ್ಲಿ ಭಾನುವಾರ ನಡೆಯಿತು.
ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ಮಡಿವಾಳರ ಸಂಘಟನೆಗಳ ಒಕ್ಕೂಟದ ರಾಜ್ಯ ಅಧ್ಯಕ್ಷ ಕಟೀಲು ಸಂಜೀವ ಮಡಿವಾಳ ಅವರು
ಸಮಸ್ಯೆಗಳಿಗೆ ಸ್ಪಂದಿಸಲು ಒಕ್ಕೂಟವು ಸದಾ ಸಿದ್ಧವಿದ್ದು, ಸಂಘಟನೆಯ ಮನೋಭಾವನೆ ಬರಬೇಕು. ಸಂಘಟಿತರಾಗಿ ಹೋರಾಟವನ್ನು ಮಾಡಬೇಕು. ನಮ್ಮ ಹಕ್ಕನ್ನು ನಾವು ಎತ್ತಿ ತೋರಿಸಬೇಕು.ಮಡಿವಂತಿಕೆಯಲ್ಲಿ ನಮ್ಮ ಪಾತ್ರ ವೇನು ಶುದ್ಧದಲ್ಲಿ ನಮ್ಮ ಕರ್ತವ್ಯವೇ ಏನು ಎಂಬುದನ್ನು ತೋರಿಸಬೇಕು.
ಮಡಿವಾಳ ಅಂದರೆ ಬಟ್ಟೆಯನ್ನು ಶುದ್ದಿ ಮಾಡಿ ಕೊಡುವುದು ಮಡಿವಾಳರ ಕೆಲಸ ಒಂದೇ ಅಲ್ಲ ಎಂಬ ಮನಸಿನಲ್ಲಿರುವ ಕೊಳಕನ್ನ ದೂರ ಮಾಡುವುದೇ ನಮ್ಮ ಕರ್ತವ್ಯವಾಗಿದೆ ಎಂದರು. ದೈವ ಆರಾಧನೆಗೆ ಚ್ಯುತಿ ಬಾರದ ಹಾಗೆ ಎಲ್ಲಾ ಸಮಾಜದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಾವು ದೈವದ ಚಾಕರಿಯನ್ನು ಮಾಡಬೇಕಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪ್ರತೀ ತಾಲೂಕಿನಲ್ಲಿ ಸಂಘಟನೆಯನ್ನು ಬೆಳೆಸಬೇಕು. ಈ ಮೂಲಕ ಮಡಿವಾಳ ಸಮಾಜದ ಬಂಧುಗಳಲ್ಲಿ ಜಾಗೃತಿಯನ್ನು ಮೂಡಿಸಬೇಕು ಎಂಬ ದೃಷ್ಟಿಯ ನಿಟ್ಟುಕೊಂಡು ನಾವು ಸಂಘಟನೆಯನ್ನು ಬಲಪಡಿಸಬೇಕು. ದಕ್ಷಿಣ ಕನ್ನಡ ಜಿಲ್ಲಾ ದೈವ ಆರಾಧಕರ ಘಟಕವನ್ನು ಮಾಡಬೇಕು ಎಂದರು.
ಈ ಸಂದರ್ಭ ನಾಗಬ್ರಹ್ಮ ಲಿಂಗೇಶ್ವರ ದೇವಸ್ಥಾನ ಬದಿನಡೆ ಬಳಂಜಾ ಬೆಳ್ತಂಗಡಿಯ ಧರ್ಮದರ್ಶಿ ಜಯ ಸಾಲಿಯಾನ್,
ದೈವ ಪಾತ್ರಿ ರುಕ್ಮಯ ಮಡಿವಾಳ ಕೊಕ್ಕಡ ಸೌತಡ್ಕ,ಶ್ರೀ ಕರ್ನಾಟಕ ಸಹಕಾರ ಸಂಘದ ಪ್ರವರ್ತಕ
ಲೋಕೇಶ್ ಗುಜರನ್ ಶಿಬರೂರು,
ಶ್ರೀ ರಜಕ ಸಮಾಜ ಸೇವಾ ಸಂಘ ಮುಲ್ಕಿ ಅಧ್ಯಕ್ಷ ಸುಶಿತ್ ಸಾಲಿಯನ್, ಪ್ರಧಾನ ಕಾರ್ಯದರ್ಶಿ
ಶಶಿಧರ್ ಕಕ್ವ ಉಪಸ್ಥಿತರಿದ್ದರು.
ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಶಶಿಧರ್ ಕಕ್ವ ರವರು ಸಮಾಜದ ಬಂಧುಗಳೆಲ್ಲರನ್ನು ಸ್ವಾಗತಿಸಿದರು.
ಸಂಘದ ಅಧ್ಯಕ್ಷ ಸುಶಿತ್ ಸಾಲಿಯಾನ್ ಕಟೀಲು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪದಾಧಿಕಾರಿಗಳ ಆಯ್ಕೆಯು ನಡೆಯಿತು.
ಸಂಚಾಲಕರಾಗಿ ರಾಜ್ಯ ಒಕ್ಕೂಟದ ರಾಜ್ಯಾಧ್ಯಕ್ಷ ಕಟೀಲು ಸಂಜೀವ ಮಡಿವಾಳ,ಗೌರವ ಅಧ್ಯಕ್ಷರಾಗಿ
ನಾಗಬ್ರಹ್ಮ ಲಿಂಗೇಶ್ವರ ದೇವಸ್ಥಾನ ಬದಿನಡೆ ಬಲಂಜದ ಧರ್ಮದರ್ಶಿ ಜಯ ಸಾಲಿಯಾನ್ ,ಜಿಲ್ಲಾ ಅಧ್ಯಕ್ಷರಾಗಿ ದೈವಪಾತ್ರಿ ರುಕ್ಮಯ ಮಡಿವಾಳ ಕೊಕ್ಕಡ ಸೌತಡ್ಕ ,
ಉಪಾಧ್ಯಕ್ಷರಾಗಿ ದೈವ ಪಾತ್ರಿ ಪ್ರಕಾಶ್ ಪಂಜಿ ಕಲ್ಲು ,ದೈವಜ್ಣ
ಕೇಶವ ಪೆರಾರ,ಕೋಶಾಧಿಕಾರಿಯಾಗಿ
ಸುಶೀತ್ ಸಾಲಿಯಾನ್ ಕಟೀಲು ,
ಪ್ರಧಾನ ಕಾರ್ಯದರ್ಶಿಯಾಗಿ
ಗೋಪಾಲ್ ಗುಜರನ್ ಶಿಬರೂರು ,
ಜೊತೆ ಕಾರ್ಯದರ್ಶಿಯಾಗಿ ವಸಂತ ಸಾಲಿಯಾನ್ ಚೇಳಾರ್, ಸಂಘಟನಾ ಕಾರ್ಯದರ್ಶಿಗಳಾಗಿ ವಿಜಯ ಸಾಲ್ಯಾನ್ ಕವತಾರ್,ಸದಾಶಿವ ಶಿಬರೂರು,ನಿರ್ದೇಶಕರಾಗಿ ಶಶಿಧರ್ ಕಕ್ವ,ಬಾಲಕೃಷ್ಣ ಕೊಕ್ಕಡ, ಮುದ್ದು ಮಡಿವಾಳ ಸೂರಿಂಜೆ,ಗಿರೀಶ್ ಮಡಿವಾಳ ಉಲ್ಲಂಜೆ ,ಬಾಬು ಗುಜರನ್ ಐಕಳ,
ವಾಸು ಮಡಿವಾಳ ಕೆಮ್ರಾಲ್
ಪದಾಧಿಕಾರಿಗಳಾಗಿ ಸರ್ವಾನುಮತದಿಂದ ಆಯ್ಕೆಯಾದರು.