-->
ವನಮಹೋತ್ಸವ ಮತ್ತು ಉಚಿತ ಸಸಿ ವಿತರಣಾ ಕಾರ್ಯಕ್ರಮ

ವನಮಹೋತ್ಸವ ಮತ್ತು ಉಚಿತ ಸಸಿ ವಿತರಣಾ ಕಾರ್ಯಕ್ರಮ

ಮೂಲ್ಕಿ: ಗಿಡ ನೆಟ್ಟು ಬೆಳೆಸಿದರೆ, ಭವಿಷ್ಯದ ಸಾಕಷ್ಟು ಉಸಿರಿಗೆ ನೀವೊಂದು ಆಧಾರವಾಗಿರುತ್ತೀರಿ 
 ಎಂದು ನಿವೃತ್ತ ವಲಯ ಅರಣ್ಯಾಧಿಕಾರಿ ಕಾರ್ನಾಡ್ ಮೂಲ್ಕಿಯ  ರಮಾನಂದ ರಾವ್  ಹೇಳಿದರು.ಅವರು ಯುವಕ ಯುವತಿ ಮಂಡಲ (ರಿ )ಚಿತ್ರಾಪು ಹಾಗೂ ಮಹಿಳಾ ಮಂಡಲ (ರಿ.) ಚಿತ್ರಾಪು ಇವರ ಆಶ್ರಯದಲ್ಲಿ  ಭಾನುವಾರದಂದು ಜರಗಿದ ವನಮಹೋತ್ಸವ ಮತ್ತು ಉಚಿತ ಸಸಿ ವಿತರಣಾ ಕಾರ್ಯಕ್ರಮದಲ್ಲಿ  ಭಾಗವಹಿಸಿ ಮಾತನಾಡಿದರು.

ಯುವಕ ಯುವತಿ ಮಂಡಲದ ಅಧ್ಯಕ್ಷ  ತುಷಾರ್ ಕೆ,ಉದ್ಯಮಿ ವಾಸು ಪೂಜಾರಿ , ಕೃಷಿಕ ರಾಜು ಪೂಜಾರಿ,ಗ್ರಾಮಸ್ಥರು, ಮಹಿಳಾ ಮಂಡಳಿಯ ಸದಸ್ಯರುಗಳು  ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜೆಸಿಐ ಮೂಲ್ಕಿಯ ಹರ್ಷರಾಜ್ ಶೆಟ್ಟಿ  ಅವರು ಸಸಿಗಳನ್ನು ಗ್ರಾಮಸ್ತರಿಗೆ  ಹಸ್ತಾಂತರಿಸಿದರು. ಶ್ರೀಮತಿ ಸರಿತಾರವರ ಪ್ರಾರ್ಥಿಸಿದರು . ಯುವಕ ಮಂಡಲದ ಕಾರ್ಯದರ್ಶಿ ಸಂದೀಪ್ ಸುವರ್ಣ ಸ್ವಾಗತಿಸಿದರು. ಮಹಿಳಾ ಮಂಡಲದ ಕೋಶಾಧಿಕಾರಿ ಶ್ರೀಮತಿ ವಿನುತಾ ಶ್ರೀಯಾನ್ ವಂದಿಸಿದರು.ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಸಾವಿತ್ರಿ ಪುಷ್ಪರಾಜ್ ಕಾರ್ಯಕ್ರಮ  ನಿರೂಪಿಸಿದರು.


ಕಾರ್ಯಕ್ರಮದಲ್ಲಿ ನೂರಾರು ಹಸಿರು ಸಸಿಗಳನ್ನು ಉಚಿತವಾಗಿ ವಿತರಿಸಲಾಯಿತು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ