Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಪೂಜಾ ಫ್ರೆಂಡ್ಸ್ ನ ವತಿಯಿಂದ ಶ್ರಮದಾನ

ಹಳೆಯಂಗಡಿ:ಭಾರೀ ಮಳೆಯಿಂದಾಗಿ ಮೂಲ್ಕಿ ತಾಲ್ಲೂಕಿನ ಹಳೆಯಂಗಡಿ ಪೇಟೆಯಿಂದ ಕಿನ್ನಿಗೋಳಿಯತ್ತ  ತೆರಳುವ ರಸ್ತೆ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ನೀರು ತುಂಬಿ ಪ್ರಯಾಣಿಕರಿಗೆ ಮತ್ತು ಪಾದಚಾರಿಗಳಿಗೆ ತೊಂದರೆಯಾಗುತ್ತಿತ್ತು. ಇಲ್ಲಿನ ಪೂಜಾ ಫ್ರೆಂಡ್ಸ್ ನ  ಯುವಕರು ಸುರಿಯುವ ಮಳೆಯಲ್ಲೇ ಶ್ರಮದಾನ ಮಾಡುವ ಮುಖಾಂತರ ರಸ್ತೆ ಬದಿಯ ಚರಂಡಿಯನ್ನು ಸ್ವಚ್ಛಗೊಳಿಸಿ ರಸ್ತೆ ಸಂಚಾರವನ್ನು ಸುಗಮಗೊಳಿಸಿದರು.