ಉಚಿತ ಕನ್ನಡಕ ವಿತರಣೆ ಕಾರ್ಯಕ್ರಮ
Saturday, July 19, 2025
ಬಜಪೆ:ಇನ್ನರ್ ವೀಲ್ ಕ್ಲಬ್, ಮಂಗಳೂರು ದಕ್ಷಿಣ ಮತ್ತು ನಾಗರಿಕ ಸೇವಾ ಸಮಿತಿ (ರಿ ) ಅಂಬೇಡ್ಕರ್ ನಗರ ಕರಂಬಾರು. ಇವರ ಆಶ್ರಯದಲ್ಲಿ ನಮ್ಮ ಕ್ಲಿನಿಕ್ ಮಳವೂರು ಸಭಾಂಗಣದಲ್ಲಿ ಉಚಿತ ಕನ್ನಡಕ ವಿತರಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಇನ್ನರ್ ವೀಲ್ ಮಂಗಳೂರು ದಕ್ಷಿಣದ ಅಧ್ಯಕ್ಷ ಶೀಜಾ ನಂಬಿಯಾರ್ ಉದ್ಘಾಟಿಸಿ ಮಾತನಾಡಿ ಉಚಿತ ಕಣ್ಣಿನ ತಪಾಸಣಾ ಶಿಬಿರಕ್ಕೆ ಸುಮಾರು 250 ಕ್ಕೂ ಹೆಚ್ಚು ಜನ ಭಾಗವಹಿಸಿದ್ದಾರೆ.ಶಿಬಿರದಲ್ಲಿ 40 ಜನರಿಗೆ ಕಣ್ಣಿನ ಪೊರೆ ಚಿಕಿತ್ಸೆ ನಡೆದಿದ್ದು ,66 ಜನರಿಗೆ ಉಚಿತ ಕನ್ನಡಕವನ್ನು ನೀಡಿದ್ದೇವೆ ಎಂದರು.
ಮುಖ್ಯ ಅತಿಥಿಗಳಾಗಿ ನಮ್ಮ ಕ್ಲಿನಿಕ್ ನ ವೈದ್ಯಾಧಿಕಾರಿ ಕುಮಾರಿ ಸಮೀಕ್ಷಾ ಡಿ. ಪಿ ,ಇನ್ನರ್ ವಿಲ್ ಕ್ಲಬ್ ನ ಕಾರ್ಯದರ್ಶಿ ಶ್ರೀಮತಿ ಕಲಾವತಿ,
ಇನ್ನರ್ ವಿಲ್ ಕ್ಲಬ್ ನ ಮಾಜಿ ಅಧ್ಯಕ್ಷೆ ಶ್ರೀಮತಿ ಶಬರಿ ಭಂಡಾರಿ,
ಪ್ರಸಾದ್ ನೇತ್ರಾಲಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ಸಯ್ಯದ್,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ದೇವಾಡಿಗ,
ಯುವವಾಹಿನಿ ಕೆಂಜಾರು ಕರಂಬಾರು ಸಂಘಟನಾ ಕಾರ್ಯದರ್ಶಿ ಮಾಧವ ಅಮೀನ್ ಕೆಂಜಾರು,ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಶ್ರೀಮತಿ ಶಶಿಕಲಾ ಮುಂತಾದವರು ಉಪಸ್ಥಿತರಿದ್ದರು.