ವಿದ್ಯುತ್ ಕಂಬಕ್ಕೆ ಟಿಪ್ಪರ್ ಡಿಕ್ಕಿ
Friday, June 6, 2025
ಕಿನ್ನಿಗೋಳಿ;ಚಾಲಕನ ನಿಯಂತ್ರಣ ತಪ್ಪಿ ಟಿಪ್ಪರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಘಟನೆ ಮೂಲ್ಕಿ - ಕಿನ್ನಿಗೋಳಿ ರಾಜ್ಯ ಹೆಧಾರಿಯ ಎಸ್.ಕೋಡಿ ಎಂಬಲ್ಲಿ ನಡೆದಿದೆ.ಕಾಪು ಕಡೆಯಿಂದ ನಿಡ್ಡೋಡಿಗೆ ಬರುತ್ತಿದ್ದ ಟಿಪ್ಪರ್ ಎಸ್.ಕೋಡಿ ಎಂಬಲ್ಲಿ ವಿದ್ಯುತ್ ಕಂಬಕ್ಕೆ ಡಿಕ್ಕಿಹೊಡೆದು ಹೆದ್ದಾರಿಯಂಚಿಗೆ ಸರಿದಿದೆ.ಟಿಪ್ಪರ್ ನಲ್ಲಿ ಮೂವರೂ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.ಘಟನೆಯಲ್ಲಿ ವಿದ್ಯುತ್ ಕಂಬಕ್ಕೆ ಹಾನಿಯಾಗಿದ್ದು,ಸ್ಥಳಕ್ಕೆ ಮೆಸ್ಕಾಂ ಇಲಾಖೆಯ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.