
ವನಸಿರಿ ಇಕೋ ಕ್ಲಬ್ ವತಿಯಿಂದ ವಿಶ್ವ ಪರಿಸರ ದಿನಾಚರಣೆ
Friday, June 6, 2025
ಹೈಡ್ರೋಪೋನಿಕ್ ಕೃಷಿ ಪದ್ಧತಿಯನ್ನು ಬಳಸಿ ಕೃಷಿ ನಡೆಸುವುದರಿಂದ ಮುಂದಿನ ಸ್ಥಳಾವಕಾಶ ಕಡಿಮೆ ಇರುವ ಹಾಗೂ ನೀರಿನ ಪ್ರಮಾಣ ಕಡಿಮೆ ಇರುವ ಸಂದರ್ಭದಲ್ಲಿ ಮುಂದಿನ ಪೀಳಿಗೆಯಲ್ಲಿ ವಿದ್ಯಾರ್ಥಿಗಳು ಇದನ್ನು ತಮ್ಮ ಮನೆಯಲ್ಲಿ ನಡೆಸಬಹುದು ಎಂದರು.
ಹೈಡ್ರೋಪೋನಿಕ್ ಕೃಷಿಯ ಕುರಿತಂತೆ ವನಸಿರಿ ಇಕೋ ಕ್ಲಬ್ ನ ಸಂಚಾಲಕಿ ಶ್ರೀಮತಿ ರಮ್ಯಾ ಕೆ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆಯ ಮೂಲಕ ಮಾಹಿತಿ ನೀಡಿದರು.
ಮಣ್ಣನ್ನು ಬಳಸದೆ ನೀರಿನಲ್ಲಿ ಖನಿಜ ಲವಣಗಳನ್ನ ಬೆರೆಸಿ, ಬೆಳೆಯನ್ನು ಬೆಳೆಸುವ ವಿಧಾನ.
ಪಾರಂಪರಿಕ ಕೃಷಿ ಗಿಂತ 80 ಶೇಕಡ ಕಡಿಮೆ ನೀರನ್ನು ಬಳಸಿ ಈ ಕೃಷಿಯನ್ನು ನಡೆಸಬಹುದು.ಈ ವಿಧಾನವನ್ನು ಬಳಸುವುದರಿಂದ ಸೀಮಿತ ಜಾಗದಲ್ಲಿ ಹೆಚ್ಚು ಉತ್ಪಾದನೆ ಸಾಧ್ಯ. ಮಣ್ಣಿನ ಫಲವತ್ತತೆ ಇಲ್ಲದ ಪ್ರದೇಶದಲ್ಲೂ ಈ ಕೃಷಿ ಸಾಧ್ಯ, ಈ ವಿಧಾನದಿಂದ ರೋಗ ರಹಿತ ಉತ್ಪಾದನೆ ಸಾಧ್ಯ ಮಣ್ಣನ್ನು ಬಳಸದೇ ಇರುವುದರಿಂದ ಮಣ್ಣಿನ ಮೂಲಕ ಹರಡುವ ರೋಗಗಳು ಗಿಡಗಳಿಗೆ ಬಾಧಿಸುವುದಿಲ್ಲ ಕಾರಣ ಹೆಚ್ಚು ಆರೋಗ್ಯಕರ ಬೆಳೆ ಸಾಧ್ಯ. ಭಾರತದಂತಹ ದೇಶದಲ್ಲಿ ಜನಸಂಖ್ಯೆ ಏರಿಕೆಯಿಂದಾಗಿ ಹೆಚ್ಚು ಆಹಾರದ ಅಗತ್ಯವಿರುವ ಸಂದರ್ಭದಲ್ಲಿ ಹೆಚ್ಚು ಉತ್ಪಾದನೆಗೆ ಸಹಾಯಕವಾಗುತ್ತದೆ ನೀರಿನ ಕೊರತೆ ಕೆಲ ರಾಜ್ಯಗಳಲ್ಲಿ ನೀರಿನ ಅಭಾವ ಇರುವ ಕಾರಣ ನೀರನ್ನು ಉಳಿಸುವ ಕೃಷಿ ಪದ್ಧತಿ ಇದು ಆಗಿದೆ ನಗರಗಳಲ್ಲಿ ಜಾಗದ ಅಭಾವ ಇರುವುದರಿಂದ ಈ ಕೃಷಿ ಪದ್ಧತಿಯನ್ನು ಅಳವಡಿಸಬಹುದು ರಾಸಾಯನಿಕ ಮುಕ್ತ ಮಣ್ಣಿನ ರೋಗ ರಹಿತ ಬೆಳೆಗಳಿಗೆ ಬೇಡಿಕೆ ಹೆಚ್ಚು ಇರುವುದರಿಂದ ಈ ಪದ್ಧತಿ ಸೂಕ್ತ.ಈ ಕೃಷಿ ಪದ್ದತಿಯಲ್ಲಿ ಟೊಮೆಟೊ, ಕ್ಯಾಪ್ಸಿಕಂ, ಬಸಳೆ, ಹರಿವೆ, ಕ್ಯಾಬೇಜ್, ಬ್ರೋಕಲಿ, ತುಳಸಿ, ಕೊತ್ತಂಬರಿ, ಪುದೀನಾ ಮೇಟಿ ಪಾಲಕ್ ಮುಂತಾದ ತರಕಾರಿಗಳನ್ನು ಬೆಳೆಸಬಹುದಾಗಿದೆ.
ಶಾಲೆಯಲ್ಲಿ ಮಣ್ಣಿನ ಫಲವತ್ತತೆ ನೀರಿನ ಲಭ್ಯತೆ ಹಾಗೂ ಸ್ಥಳಾವಕಾಶ ಕಡಿಮೆ ಇರುವುದರಿಂದ ಈ ರೀತಿಯ ಕೃಷಿಯನ್ನು ಪ್ರಯೋಗಾತ್ಮಕವಾಗಿ ಸಣ್ಣ ಪ್ರಮಾಣದಲ್ಲಿ ನಡೆಸಲು ಆರಂಭಿಸಲಾಗಿದೆ.
ಶಾಲಾ ಪರಿಸರದ ಲಭ್ಯವಿರುವ ಸ್ಥಳಗಳಲ್ಲಿ ಅಕ್ಷರ ದಾಸೋಹ ಕಾರ್ಯಕ್ರಮಕ್ಕೆ ಸಹಾಯವಾಗುವ ರೀತಿಯಲ್ಲಿ ಬಸಳೆ, ಬೆಂಡೆ, ಕುಂಬಳಕಾಯಿ, ಕುಂಬಳಕಾಯಿ, ಕರಿಮೆಣಸು, ಕರಿಬೇವು ಗಿಡಗಳನ್ನು ನೆಡಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಶಿಕ್ಷಕರಾದ ಪೂರ್ಣಿಮಾ, ವಿದ್ಯಾಲತಾ, ಚಿತ್ರ ಶ್ರೀ, ವಿದ್ಯಾ ಗೌರಿ ವಿನ್ನಿ ನಿರ್ಮಲ ಡಿಸೋಜಾ, ಜಯಂತಿ ಮತ್ತು ಡಾ. ಅನಿತ್ ಕುಮಾರ್ ಉಪಸ್ಥಿತರಿದ್ದರು