ನಿಲ್ಲಿಸಿದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿ,ಮೂರುಕಾವೇರಿಯಲ್ಲಿ ಘಟನೆ
Friday, June 6, 2025
ಕಿನ್ನಿಗೋಳಿ : ಗ್ಯಾರೇಜ್ ನಲ್ಲಿ ದುರಸ್ತಿ ಮಾಡಿ ಇಟ್ಟಿದ್ದ ಇನ್ನೋವಾ ಕಾರಿನಲ್ಲಿ ಆಕಸ್ಮಿಕ ಬೆಂಕಿ ಉಂಟಾದ ಘಟನೆ ಮೂರುಕಾವೇರಿಯ ಗ್ಯಾರೇಜೊಂದರಲ್ಲಿ ನಡೆದಿದೆ.ಬೆಂಕಿಯನ್ನು ನಂದಿಸಲು ಸ್ಥಳೀಯರು ಹರ ಸಾಹಸವನ್ನು ಪಟ್ಟು ಬೆಂಕಿನಂದಿಸಿದ್ದಾರೆ.
ಕಿನ್ನಿಗೋಳಿ ಸಮೀಪದ ಬಟ್ಟ ಕೋಡಿಯ ವ್ಯಕ್ತಿಯೊಬ್ಬರು ಇನ್ನೋವಾ ಕಾರನ್ನು ಮುರುಕಾವೇರಿ ಬಳಿಯ ಕಾರ್ ಗ್ಯಾರೇಜ್ ನಲ್ಲಿ ದಿನದ ಹಿಂದೆ ದುರಸ್ತಿಗೆ ಕೊಟ್ಟಿದ್ದರು. ಅದರಂತೆ ಗ್ಯಾರೇಜ್ ಮಾಲೀಕ ಕಾರ್ ದುರಸ್ತಿ ಮಾಡಿ ಗ್ಯಾರೇಜ್ ಹೊರಗಡೆ ಇಟ್ಟಿದ್ದರು.
ಮಧ್ಯಾಹ್ನ ಸುಮಾರು 1:30 ರ ವೇಳೆಗೆ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಧಗ ಧಗನೆ ಉರಿಯಲಾರಂಭಿಸಿದೆ.
ಘಟನೆಯಿಂದಾಗಿ ಕಾರಿಗೆ ಹಾನಿಯಾಗಿದೆ. ಸಮೀಪವೇ ಹಲವು ಕಾರುಗಳನ್ನು ನಿಲ್ಲಿಸಲಾಗಿದ್ದು,ಸ್ಥಳೀಯರು ಕೂಡಲೇ ಎಚ್ಚೆತ್ತು ಬೆಂಕಿ ನಂದಿಸಿದ್ದರಿಂದ ಇತರ ವಾಹನಗಳಿಗೆ ಹಾನಿಯುಂಟಾಗುವುದು ತಪ್ಪಿದೆ.ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.