ಕಿನ್ನಿಗೋಳಿಯಲ್ಲಿ ಟ್ರಾಪಿಕ್ ಕಿರಿಕಿರಿ
Friday, June 6, 2025
ಕಿನ್ನಿಗೋಳಿ :ಕಿನ್ನಿಗೋಳಿಯಲ್ಲಿನ ಟ್ರಾಫಿಕ್ ಕಿರಿಕಿರಿಗೆ ಯಾರೂ ಕೇಳುವವರು ಇಲ್ಲ ಹೇಳುವವರೂ ಇಲ್ಲದಂತಾಗಿದೆ.ದಿನಂಪ್ರತಿ ಹೆದ್ದಾರಿಯಂಚಿನಲ್ಲಿ ಹಾಗೂ ಇಲ್ಲಿನ ಮಾರ್ಕೆಟ್ ನ ಸಮೀಪ ವಾಹನಗಳನ್ನು ಪಾರ್ಕ್ ಮಾಡುದರಿಂದ ಹೆದ್ದಾರಿಯಲ್ಲಿ ಸಂಚರಿಸುವಂತಹ ವಾಹನಗಳ ಸವಾರ ರ ಪಾಲಿಗೆ ಕಂಟಕವಾಗಿ ಪರಿಣಮಿಸಿದೆ. ಈ ಬಗ್ಗೆ ಹಲವು ಭಾರೀ ಸ್ಥಳೀಯರು ಸಂಬಂಧಪಟ್ಟವರಿಗೆ ಮನವಿಯನ್ನು ಮಾಡಿದ್ದರೂ ಪ್ರಯೋಜನವಿಲ್ಲದಂತಾಗಿದೆ.ಇಲ್ಲಿನ ಪಾರ್ಕಿಂಗ್ ಸಮಸ್ಯೆಯ ಬಗ್ಗೆ ಸಂಬಂಧಪಟ್ಟ ಕಿನ್ನಿಗೋಳಿ ಪಟ್ಟಣ ಪಂಚಾಯತ್ ನಲ್ಲಿ ಹಲವು ಭಾರಿ ಅಧಿಕಾರಿಗಳ ಜೊತೆಗೆ ಸಭೆ ನಡೆದಿದ್ದು,ಕೇವಲ ಸಭೆ ಮಾತ್ರ ಸಭೆ ನಡೆದಿದ್ದು,ಸಮಸ್ಯೆಗೆ ಸ್ಪಂದನೆ ಮಾತ್ರ ಇಲ್ಲ ಎಂಬುದು ಸ್ಥಳೀಯರ ಮಾತಾಗಿದೆ.
ಕಿನ್ನಿಗೋಳಿಯ ಕೇಂದ್ರ ಬಸ್ ನಿಲ್ದಾಣ,ಸುಖಾನಂದ ಸರ್ಕಲ್ ,ಮಾರುಕಟ್ಟೆಯ ಸಮೀಪ ದಿನಂಪ್ರತಿ ವಾಹನಗಳ ನಿಲುಗಡೆಯಿಂದ ಸಮಸ್ಯೆ ತಪ್ಪಿದಲ್ಲ.ಬಸ್ ನಿಲ್ದಾಣದಿಂದ ಬೇರೆ ಬೇರೆ ಕಡೆಗಳಿಗೆ ತೆರಲುವ ಬಸ್ ಗಳು ಕೂಡ ಇಲ್ಲಿನ ಮಾರುಕಟ್ಟೆ ತನಕ ಬರಲು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತಿದೆ.ಹಾಗಾಗಿ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳು ಕೂಡ ಬಸ್ ನ ಹಿಂದೆಯೇ ಇಲ್ಲಿನ ಮಾರುಕಟ್ಟೆ ತನಕ ಬರಬೇಕಾದ ಪರಿಸ್ಥಿತಿ.ಇದರಿಂದಾಗಿ ಹೆದ್ದಾರಿಯುದ್ದಕ್ಕೂ ವಾಹನಗಳು ಸಾಲು ಗಟ್ಟಿ ನಿಂತಿರುವ ದೃಶ್ಯ ದಿನಂಪ್ರತಿ ಇಲ್ಲಿ ಕಂಡುಬರುತ್ತಿದೆ.ಇಲ್ಲಿನ ಸುಖಾನಂದ ಸರ್ಕಲ್ ನ ಸಮೀಪವೇ ವಾಹನಗಳನ್ನು ನಿಲುಗಡೆ ಮಾಡುದರಿಂದ ಕಟೀಲು ಕಡೆಯಿಂದ ಕಿನ್ನಿಗೋಳಿ ಹಾಗೂ ಮತ್ತಿತರ ಕಡೆಗಳಿಗೆ ಸಂಚರಿಸುವ ವಾಹನಗಳ ಸವಾರರಿಗೆ ಸಮಸ್ಯೆಯಾಗಿದೆ.
ಈ ಬಗ್ಗೆ ಮಾತನಾಡಿದ ಸ್ಥಳೀಯರೊಬ್ಬರು ಇಲ್ಲಿನ ಟ್ರಾಫಿಕ್ ಸಮಸ್ಯೆ ಹಲವು ವರ್ಷಗಳಿಂದ ಇದ್ದು,ಇದುವರೆಗೂ ಯಾವುದೇ ಸ್ಪಂದನೆಇಲ್ಲ.ವಾಹನಗಳ ಪಾರ್ಕಿಂಗ್ ಗೆ ಸೂಕ್ತ ಸ್ಥಳವನ್ನು ಸಂಬಂಧಪಟ್ಟ ಪಂಚಾಯತ್ ಗುರುತಿಸಬೇಕು.ಟ್ರಾಫಿಕ್ ಪೊಲೀಸರನ್ನು ನೇಮಿಸಬೇಕು.ಹೆದ್ದಾರಿಯಂಚಿನ ಎಲ್ಲೆಂದರಲ್ಲಿ ವಾಹನಗಳನ್ನು ಪಾರ್ಕ್ ಮಾಡುವವರಿಗೆ ದಂಡ ವಿಧಿಸಬೇಕು.ಬಸ್ ನಿಲ್ದಾಣದಿಂದ ಬೇರೆ ಬೇರೆ ಕಡೆಗೆ ತೆರಲುವ ಬಸ್ ಗಳು ನೇರವಾಗಿ ಇಲ್ಲಿನ ಮಾರುಕಟ್ಟೆ ಸಮೀಪದ ಬಸ್ ನಿಲ್ದಾಣದ ಬಳಿಯೇ ನಿಲ್ಲಬೇಕು.ಕಿನ್ನಿಗೋಳಿಯ ಮುಖ್ಯ ಜಂಕ್ಷನ್ ಸಮೀಪ ಹೆದ್ದಾರಿಯಂಚಿನಲ್ಲಿ ಬಸ್ ಗಳ ನಿಲುಗಡೆಯಾಗಬಾರದು.ಇಂತಹ ವ್ಯವಸ್ಥೆಗಳಿಂದ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಸಿಗಬಹುದು ಎಂದರು
ಕಿನ್ನಿಗೋಳಿಯಲ್ಲಿನ ಟ್ರಾಫಿಕ್ ಸಮಸ್ಯೆ ಯಾವಾಗ ಬಗೆಹರಿಯಬಹುದು ಎಂಬ ಪ್ರಶ್ನೆ ಸ್ಥಳೀಯರನ್ನು ಕಾಡುತ್ತಿದೆ.ಸಂಬಂಧ ಪಟ್ಟ ಪಂಚಾಯತ್ ಈ ಬಗ್ಗೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಇಲ್ಲಿನ ಟ್ರಾಫಿಕ್ ಸಮಸ್ಯೆಯನ್ನು ಬಗೆಹರಿಯುವುದೆ ಎಂದು ಕಾದುನೋಡಬೇಕಾಗಿದೆ.