ರಾಜ್ಯಮಟ್ಟದ ಪವರ್ ಲಿಪ್ಟಿಂಗ್ ಸ್ಪರ್ಧೆ,ಕಿನ್ನಿಗೋಳಿಯ ನಾಲ್ವರಿಗೆ ಚಿನ್ನದ ಪದಕ
Monday, June 2, 2025
ಕಾವೂರು:ಕಾವೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ 2025, ಸ್ಪರ್ಧೆಯಲ್ಲಿ ಕ್ರಿಸ್ ಅಲನ್ ಡಿಸೋಜಾ 53ಕೆಜಿ ಸಬ್ ಜ್ಯೂನಿಯರ್, ಶಾನ್ ಮೇನೇಜಸ್ 120ಕೆಜಿ ಸಬ್ ಜ್ಯೂನಿಯರ್, ಕೀರ್ತನ್ ಕಟೀಲ್ 53ಕೆಜಿ ಜ್ಯೂನಿಯರ್, ದಿಶಾ 76ಕೆಜಿ ಜ್ಯೂನಿಯರ್ ಅವರು ಚಿನ್ನದ ಪದಕ ಪಡೆದಿದ್ದಾರೆ. ಆಶ್ಲೇ ಸಲ್ಡಾನ್ಹಾ 53ಕೆಜಿ ಸಬ್ ಜ್ಯೂನಿಯರ್ ಹಾಗೂ ರೋವಿನ್ ಸೆರ್ರವೊ +120 ಕೆಜಿ ಸಬ್ ಜ್ಯೂನಿಯರ್, ಬೆಳ್ಳಿ ಪದಕ ಪಡೆದಿದ್ದಾರೆ. ನಂದಿತಾ 76ಕೆಜಿ ಸೀನಿಯರ್, ಕಂಚಿನ ಪದಕ ಪಡೆದಿದ್ದಾರೆ. ಇವರು ಆಶ್ರಿತ್ ಮತ್ತು ಸುಪ್ರಮ್ ಅವರಿಂದ ತರಬೇತಿ ಪಡೆಯುತ್ತಿದ್ದು ಕಿನ್ನಿಗೋಳಿಯ ಎ. ಎಸ್. ಪಿ. ಎ ಫಿಟ್ನೆಸ್ ನ ಸದಸ್ಯರಾಗಿದ್ದಾರೆ.