ಮರ ಬಿದ್ದು ಮನೆಗೆ ಹಾನಿ,ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಸಹಾಯಧನ ಚೆಕ್ ವಿತರಣೆ
Friday, May 30, 2025
ಕಿನ್ನಿಗೋಳಿ:ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಿನ್ನಿಗೋಳಿ ವಲಯದ ಕವತ್ತಾರು ಕಾರ್ಯಕ್ಷೇತ್ರದ ಭಾಗ್ಯಶ್ರೀ ಸ್ವ ಸಹಾಯ ಸಂಘದ ಸದಸ್ಯೆ ಅನಿತಾರವರ ಮನೆಯ ಬಳಿ ಇದ್ದ ಅಡಿಕೆ ಮರ ಮನೆಯ ಮೇಲೆ ಬಿದ್ದು ಹಾನಿ ಆಗಿದ್ದು , ಅವರಿಗೆ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹಗ್ಗಡೆಯವರು 3000 ರೂ ಸಹಾಯಧನವನ್ನು ಮಂಜೂರು ಮಾಡಿದ್ದಾರೆ.ಹಾಗೂ ಬ್ರಹ್ಮಶ್ರೀ ಸಂಘದ ಸುಧಾಕರ್ ರವರ ಮನೆಗೂ ಮರ ಬಿದ್ದು ಬಿದ್ದು ಹಾನಿಯಾಗಿದ್ದು ಇವರಿಗೂ 10,000 ರೂ ಸಹಾಯಧನ ವನ್ನು ಮಂಜೂರು ಮಾಡಿದ್ದಾರೆ.