-->
ಶ್ರೀ ಚಂದ್ರಶೇಖರ ಸ್ವಾಮೀಜಿಯವರ ಶ್ರೀರಕ್ಷೆಯೇ, ಸಾಧನೆಗೆ ಪ್ರೇರಣೆ : ಡಾ.ದೇವಿಪ್ರಸಾದ್ ಶೆಟ್ಟಿ ಬೆಳಪು

ಶ್ರೀ ಚಂದ್ರಶೇಖರ ಸ್ವಾಮೀಜಿಯವರ ಶ್ರೀರಕ್ಷೆಯೇ, ಸಾಧನೆಗೆ ಪ್ರೇರಣೆ : ಡಾ.ದೇವಿಪ್ರಸಾದ್ ಶೆಟ್ಟಿ ಬೆಳಪು

ಮುಲ್ಕಿ : ಬೆಳಪು ಎಂಬ ಗ್ರಾಮೀಣ ಭಾಗದಿಂದ ಬೆಳೆದ ತನಗೆ ವಿಶ್ವಮಟ್ಟದಲ್ಲಿ ವಾಸ್ತುತಜ್ಞರಾಗಿ ಮನ್ನಣೆ ಪಡೆದಿರುವ ಪರಮಪೂಜ್ಯ ಶ್ರೀ ಚಂದ್ರಶೇಖರ ಸ್ವಾಮೀಜಿಯವರ ಶ್ರೀರಕ್ಷೆಯೇ ನನ್ನ ಬದುಕಿನ ಸಾಧನೆಗೆ ಮೂಲ ಪ್ರೇರಣೆಯಾಗಿದೆ. ಪ್ರತಿಯೊಂದು ಹಂತದಲ್ಲಿಯೂ ಮಾರ್ಗದರ್ಶನ ನೀಡಿದವರು. ಅಚಲ ನಂಬಿಕೆಯೊಂದಿಗೆ ಸಮಾಜದ ಸ್ಪಂದನೆಯ ಜೊತೆಗೆ ನಾಯಕತ್ವದ ಔದಾರ್ಯತೆಯ ಹಿನ್ನೆಲೆಯನ್ನು ತಿಳಿಹೇಳಿರುವುದರಿಂದ ಇಷ್ಟು ಎತ್ತರಕ್ಕೆ ಬೆಳೆದಿದ್ದೇನೆ ಎಂದು ಕರ್ನಾಟಕ ರಾಜ್ಯ ಹಾಲು ಮಹಾಮಂಡಲ ನಿಯಮಿತ ಬೆಂಗಳೂರು (ಕೆ.ಎಂ.ಎಫ್) ಹಾಗೂ ದಕ್ಷಿಣ ಕನ್ನಡ ಹಾಲು ಒಕ್ಕೂಟದ ನಿರ್ದೇಶಕ ಐಕಳಬಾವ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಹೇಳಿದರು. 
ಅವರು ಮೂಲ್ಕಿಯ ಶ್ರೀ ಚಂದ್ರಶೇಖರ ಸ್ವಾಮೀಜಿ ಸೇವಾಶ್ರಮದಲ್ಲಿ ಕರ್ನಾಟಕ ರಾಜ್ಯ ಹಾಲು ಮಹಾಮಂಡಲ ನಿಯಮಿತ ಬೆಂಗಳೂರು (ಕೆ.ಎಂ.ಎಫ್) ಹಾಗೂ ದಕ್ಷಿಣ ಕನ್ನಡ ಹಾಲು ಒಕ್ಕೂಟದ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಶ್ರೀ ಚಂದ್ರಶೇಖರ ಸ್ವಾಮೀಜಿಯವರಿಂದ ವಿಶೇಷವಾಗಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. 
ಈ ಸಂದರ್ಭದಲ್ಲಿ ಐಕಳಬಾವ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಅವರನ್ನು ಆಶ್ರಮದ ವತಿಯಿಂದ ತಿರುಪತಿಯ ವಿಶೇಷ ಶೇಷವಸ್ತ್ರ, ಸನ್ಮಾನ ಫಲಕ ಹಾಗೂ ಸ್ಮರಣಿಕೆಯೊಂದಿಗೆ ಗಣ್ಯರ ಸಮ್ಮುಖದಲ್ಲಿ ಶ್ರೀ ಚಂದ್ರಶೇಖರ ಸ್ವಾಮೀಜಿಯವರು ಸನ್ಮಾನಿಸಿದರು. 
ಆಶ್ರಮದ ನಿರ್ದೇಶಕರಾದ ರಜನಿ ಸಿ. ಭಟ್, ರಾಹುಲ್ ಸಿ. ಭಟ್, ಆಶ್ರಮದ ಸಂಚಾಲಕ ಪುನೀತ್ ಕೃಷ್ಣ , ಭದ್ರತಾ ಅಧಿಕಾರಿಗಳಾದ ಪ್ರೇಮ್ ಕುಮಾರ್, ಶಿವರಾಜ್ ಕೆ, ಮೋಹನ್ ಕುಮಾರ್,ದೇವರಾಜ್ ಯಡಗೆ ಮತ್ತಿತರರು ಉಪಸ್ಥಿತರಿದ್ದರು.ಪುನೀತ್ ಕೃಷ್ಣ ಸ್ವಾಗತಿಸಿ ನಿರೂಪಿಸಿದರು.

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ