ಹೆದ್ದಾರಿಯಂಚಿನಲ್ಲಿ ಚರಂಡಿ ವ್ಯವಸ್ಥೆ ಕಲ್ಪಿಸಿ,ಸಾರ್ವಜನಿಕರ ಅಗ್ರಹ
Friday, May 30, 2025
ಬಜಪೆ:ಹೆದ್ದಾರಿಯಂಚಿನಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಹೆದ್ದಾರಿಯಲ್ಲಿಯೇ ಮಳೆ ನೀರು ಹರಿಯುದರಿಂದ ವಾಹನಗಳ ಸವಾರರಿಗೆ ಸಮಸ್ಯೆಯಾಗಿದೆ.ಬಜ್ಪೆಯ ಸುಂಕದಕಟ್ಟೆ ನವರಂಗ್ ಕಾಂಪೌಂಡ್ ಸಮೀಪ ಹೆದ್ದಾರಿಯಲ್ಲಿಯೇ ಮಳೆ ನೀರು ಹರಿಯುತ್ತಿದ್ದು,ವಾಹನಿಗರಿಗೆ ಇಲ್ಲಿ ಪ್ರತಿವರ್ಷವೂ ಸಮಸ್ಯೆಯಾಗುತ್ತಿದೆ.ಅಲ್ಲದೆ ಹೆದ್ದಾರಿ ಕೂಡ ಇಲ್ಲಿ ಹದಗೆಟ್ಟಿದ್ದು ಅಲ್ಲಲ್ಲಿಹೊಂಡಗಳು ಉಂಟಾಗಿದೆ.ಒಂದೆಡೆ ಚರಂಡಿ ವ್ಯವಸ್ಥೆ ಇಲ್ಲ.ಇನ್ನೊಂದೆಡೆ ಹೆದ್ದಾರಿಯಲ್ಲಿ ಹೊಂಡಗಳ ಸಮಸ್ಯೆ.ಇಂತಹ ಸಮಸ್ಯೆಗಳಿಂದ ವಾಹನಗಳ ಸವಾರರು ಹೆದ್ದಾರಿಯಲ್ಲಿ ಸಂಚರಿಸುವುದು ಕೂಡ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ.