ಶಾಲಾ ಆರಂಭೋತ್ಸವಕ್ಕೆ ಹೇಗಿದೆ ಸಿದ್ದತೆ
Friday, May 30, 2025
ಬಜಪೆ:ಈಗಾಗಲೇ ಬೇಸಿಗೆ ರಜೆ ಮುಗಿದು ಶಾಲೆಗಳು ಇಂದು ಅರಂಭವಾಗಲಿದ್ದು, ದ.ಕ ಜಿಲ್ಲೆಯಾದ್ಯಂತ ಕಳೆದೆರಡು ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ಇಂದು ಜಿಲ್ಲಾಡಳಿತ ಶಾಲೆಗಳಿಗೆ ರಜೆ ಘೋಷಿಸಿದೆ.ಇದರಿಂದಾಗಿ ಶಾಲಾ ಆರಂಭೋತ್ಸವವು ನಡೆಯಲಿಲ್ಲ. ಶಾಲಾ ಆರಂಭೋತ್ಸವಕ್ಕೆ ಕೆಲವು ಶಾಲೆಗಳಲ್ಲಿ ಸಿದ್ದತೆಗಳು ನಡೆದಿದೆ.ಮಂಗಳೂರು ತಾಲೂಕಿನ ದ.ಕ ಜಿ.ಪಂ ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರು ಇಲ್ಲಿ ಶಾಲಾ ಆರಂಭೋತ್ಸವಕ್ಕೆ ಸಕಲ ಸಿದ್ದತೆಗಳು ಭರದಿಂದ ನಡೆದಿದ್ದು,ಇಂದು ಶಾಲೆಗಳಿಗೆ ರಜೆ ಇರುದರಿಂದ ಶಾಲಾ ಆರಂಭೋತ್ಸವ ನಡೆದಿಲ್ಲ.ಇದಕ್ಕಾಗಿ ಮಕ್ಕಳೊಂದಿಗೆ ಶಾಲಾ ಶಿಕ್ಷಕರು,ಶಾಲಾ ಅಭಿವೃದ್ದಿ ಸಮಿತಿ ಹಾಗೂ ಪೋಷಕರು ಶಾಲಾ ಅಲಂಕಾರದಲ್ಲಿ ತೊಡಗಿಸಿಕೊಂಡಿದ್ದರು.
ಬಡಗ ಎಕ್ಕಾರು ಸರಕಾರಿ ಪ್ರೌಢಶಾಲೆ ಶೈಕ್ಷಣಿಕ ಹಾಗೂ ಕ್ರೀಡಾಕ್ಷೇತ್ರದಲ್ಲಿ ಉತ್ತಮ ಸಾಧನೆಯನ್ನು ಪಡೆದು ರಾಷ್ಟ್ರಮಟ್ಟದಲ್ಲಿ ಪ್ರಸಿದ್ದಿಯನ್ನು ಪಡೆದಿದೆ.ಅಲ್ಲದೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ 100 ಫಲಿತಾಂಶವನ್ನು ಗಳಿಸಿ ಶಾಲೆಗೆ ಕೀರ್ತಿ ತಂದಿದೆ.