ಕಟೀಲು ಶಾಲೆಯಲ್ಲಿ ಉಚಿತ ಪುಸ್ತಕ ವಿತರಣೆ
Monday, June 9, 2025
ಕಟೀಲು : ಇಲ್ಲಿನ ಅನುದಾನಿತ ಶ್ರೀ ದುರ್ಗಾಪರಮೇಶ್ವರಿ ಹಿರಿಯ ಪ್ರಾಥಮಿಕ ಶಾಲೆಯ ೧೫೬ ವಿದ್ಯಾರ್ಥಿಗಳಿಗೆ ಶಾಲೆಯ ಪ್ರಾಕ್ತನ ವಿದ್ಯಾರ್ಥಿಗಳಾದ ರಾಘವ ಚೌಟ, ಭರತ್ ಶೆಟ್ಟಿ ಹಾಗೂ ಕೆ. ರಮೇಶ್ ಪ್ರಭು ಇವರ ವತಿಯಿಂದ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಿತು.
ದೇವಳದ ಅರ್ಚಕ ವೆಂಕಟರಮಣ ಆಸ್ರಣ್ಣ, ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಲೋಕಯ್ಯ ಸಾಲ್ಯಾನ್, ಕೊಡೆತ್ತೂರುಗುತ್ತು ಶರತ್ ಶೆಟ್ಟಿ ಹಾಗೂ ಕಟೀಲು ಇಂಗ್ಲಿಷ್ ಮಾಧ್ಯಮ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಚಂದ್ರಶೇಖರ ಭಟ್ ಹಾಗೂ ಸಂಸ್ಥೆಯ ಶಿಕ್ಷಕರು ಉಪಸ್ಥಿತರಿದ್ದರು. ಪವಿತ್ರ ಕಾರ್ಯಕ್ರಮ್ನು ನಿರೂಪಿಸಿದರು. ಶಿಕ್ಷಕಿಯಾದ ವಿದ್ಯಾಶ್ರೀ ಸ್ವಾಗತಿಸಿದರು. ಶ್ರೀಮತಿ ಬೇಬಿ ಎಂ.ಕೆ ವಂದಿಸಿದರು.