ಶಾಸಕ ಡಾ.ಭರತ್ ಶೆಟ್ಟಿಯವರನ್ನು ಭೇಟಿ ಮಾಡಿದ ಕುಪ್ಪೆಪದವು ಗ್ರಾ.ಪಂ ನ ನಿಯೋಗ
Tuesday, June 10, 2025
ಮಂಗಳೂರು:ಕುಪ್ಪೆಪದವು ಗ್ರಾಮ ಪಂಚಾಯತ್ ನ ಅಧ್ಯಕ್ಷೆ ಶ್ರೀಮತಿ ವಿಮಲ ಗಿರಿಧರ್ , ಸರ್ವ ಸದಸ್ಯರು ಹಾಗೂ ಸಿಬ್ಬಂದಿಗಳನ್ನು ಒಳಗೊಂಡ ನಿಯೋಗವು ಇಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ವೈ ಭರತ್ ಶೆಟ್ಟಿಯವರನ್ನು ಭೇಟಿ ಮಾಡಿ ಗ್ರಾಮ ಪಂಚಾಯತಿಗೆ ಒಳಪಟ್ಟ ನಿವೇಶನ ರಹಿತ ಫಲಾನುಭವಿಗಳ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.
ಶಾಸಕ ಡಾ.ಭರತ್ ಶೆಟ್ಟಿ ಅವರು ತಾಂತ್ರಿಕ ಸಮಸ್ಯೆಗಳನ್ನು ವಿವರಿಸಿ ಗ್ರಾಮ ಪಂಚಾಯತಿನ ಮುಂದಿನ ಕಾರ್ಯ ಯೋಜನೆಗಳಿಗೆ ಬೆಂಬಲಿಸುವುದಾಗಿ ಹಾಗೂ ಸೂಕ್ತ ಅನುದಾನಗಳನ್ನು ಒದಗಿಸುವುದಾಗಿ ಭರವಸೆ ನೀಡಿದರು.ಪಂಚಾಯತಿ ಗೊತ್ತುಪಡಿಸಿದ ಮನೆ ನಿವೇಶನದ ಜಾಗವನ್ನು ಕುದ್ದು ತಾನೇ ಪರಿಶೀಲಿಸಿ ಫಲಾನುಭವಿಗಳೊಂದಿಗೆ ಮಾತುಕತೆ ನಡೆಸುದಾಗಿ ತಿಳಿಸಿದರು.