-->
ಆರ್ ಸಿ ಬಿ  ತಂಡದ ವಿಜಯೋತ್ಸವದ ಸಂದರ್ಭ ಕಾಲ್ತುಳಿತ ಪ್ರಕರಣ ಜೀವ ಹಾನಿಗೆ ಸರಕಾರ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಇರುವುದು ಕಾರಣ - ಡಾ. ವೈ.ಭರತ್ ಶೆಟ್ಟಿ

ಆರ್ ಸಿ ಬಿ ತಂಡದ ವಿಜಯೋತ್ಸವದ ಸಂದರ್ಭ ಕಾಲ್ತುಳಿತ ಪ್ರಕರಣ ಜೀವ ಹಾನಿಗೆ ಸರಕಾರ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಇರುವುದು ಕಾರಣ - ಡಾ. ವೈ.ಭರತ್ ಶೆಟ್ಟಿ

ಮಂಗಳೂರು:ಆರ್ ಸಿ ಬಿ  ತಂಡದ ವಿಜಯೋತ್ಸವದ ಸಂದರ್ಭ ಕಾಲ್ತುಳಿತ ಪ್ರಕರಣ ಜೀವ ಹಾನಿಗೆ ಸರಕಾರ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಇರುವುದು ಕಾರಣವಾಗಿದೆ ಎಂದು ಶಾಸಕರಾದ ಡಾ. ವೈ.ಭರತ್ ಶೆಟ್ಟಿ ಹೇಳಿದ್ದಾರೆ.

ಮೃತ ಕುಟುಂಬಗಳಿಗೆ ಸಾಂತ್ವಾನ ಹೇಳಬಯಸುತ್ತೇನೆ.ಗಾಯಾಳುಗಳು ಬೇಗನೇ ಗುಣಮುಖರಾಗಲಿ ಎಂದು ದೇವರಲ್ಲಿ ಬೇಡುತ್ತೇನೆ.

 18 ವರ್ಷಗಳ ಬಳಿಕ ಟ್ರೋಫಿ ಗಳಿಸಿರುವ ತಂಡದ ವೀಕ್ಷಣೆಗೆ ಲಕ್ಷಾಂತರ ಜನ ಮುಗಿಬೀಳಬಹುದು ಎಂಬ ಮುಂದಾಲೋಚನೆ ಸರಕಾರಕ್ಕೆ ಇರಬೇಕಿತ್ತು.
 ಕ್ರಿಕೆಟ್ ಆಟಗಾರರ ಚಲಿಸುವ ಮಾರ್ಗದ ಉದ್ದಕ್ಕೂ ಕ್ರೀಡಾಂಗಣದ ಸುತ್ತಮುತ್ತ ಬ್ಯಾರಿಗೇಡ್ ಅಳವಡಿಸಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕಿತ್ತು.
 ಇದೆಲ್ಲವನ್ನು ಬಿಟ್ಟು ವಿಧಾನಸೌಧದ ಮುಂಭಾಗ ಸರಕಾರ ಆಟಗಾರರನ್ನ ಗೌರವಿಸುವ ಮೂಲಕ ಆರ್‌ಸಿಬಿ ಅಭಿಮಾನಿಗಳ  ಸುರಕ್ಷತಾ ಕ್ರಮಕ್ಕೆ ಗಮನ ನೀಡದೆ  ಈ ಘಟನೆ ಸಂಭವಿಸಿದೆ. ಸರಕಾರ ವೈಫಲ್ಯದ ಜವಾಬ್ದಾರಿಯನ್ನ ಕೂತುಕೊಳ್ಳಬೇಕು ಎಂದು ಹೇಳಿದ್ದಾರೆ.ಸರಕಾರ ಹಾಗೂ ಆರ್ ಸಿಬಿ ,ಬಿಸಿಸಿಐ ಜತೆ ಸೇರಿ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ