ತೋಕೂರಿನ ಡಾ. ಎಂಆರ್‌ಎಸ್‌ಎಂ ಇಂಗ್ಲಿಷ್ ಮಾಧ್ಯಮ ಶಾಲೆ ಶೇ.100 ಫಲಿತಾಂಶ
Wednesday, May 14, 2025
ಮುಲ್ಕಿ: ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆಗಳಲ್ಲಿ ತೋಕೂರಿನ ಡಾ. ಎಂಆರ್‌ಎಸ್‌ಎಂ ಇಂಗ್ಲಿಷ್ ಮಾಧ್ಯಮ ಶಾಲೆಯು ಗಮನಾರ್ಹವಾದ ಶೇ.100 ರಷ್ಟು ಉತ್ತೀರ್ಣತೆಯನ್ನು ಸಾಧಿಸುವ ಮೂಲಕ ತನ್ನ ಛಾಪು ಮೂಡಿಸಿದೆ.
ಒಟ್ಟು 47 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಕುಮಾರಿ ದಿಯಾ ಶೇಕಡಾ 95.6 ಅಂಕಗಳೊಂದಿಗೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ನಿಟ್ಟೆ ಎಜುಕೇಷನ್ ಟ್ರಸ್ಟ್ ಆಡಳಿತವಿರುವ ಎಮ್. ಆರ್. ಎಸ್. ಎಮ್ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಶ್ರೀಲತಾ ರಾವ್, ಶಿಕ್ಷಕ ವರ್ಗ, ಪಿ. ಟಿ. ಎ ಅಧ್ಯಕ್ಷರಾದ ಪುಷ್ಪರಾಜ್ ಚೌಟ, ಹಾಗೂ ಸರ್ವ ಸದಸ್ಯರು ಮಕ್ಕಳ ಈ ಗಮನಾರ್ಹ ಸಾಧನೆಗಾಗಿ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.