ಕೊರಗ ಜನಾಂಗದ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ
Wednesday, May 14, 2025
ಮುಲ್ಕಿ: ಸಮಾಜದ ಅಶಕ್ತ, ಬಡ, ಹಿಂದುಳಿದ ವರ್ಗದ ಜನರ ಅಭಿವೃದ್ಧಿಗೆ ಸರಕಾರ ಬದ್ಧವಾಗಿದೆ ಎಂದು ಮುಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು ಅವರು ಮುಲ್ಕಿ ತಾಲೂಕು ವ್ಯಾಪ್ತಿಯ ಕೊರಗ ಜನಾಂಗದ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿ ಮಾತನಾಡಿದರು
ಅವರು ಮಾತನಾಡಿ ತಾಲೂಕಿನ ಕೊಲ್ಲೂರು ಪದವು ಎಂಬಲ್ಲಿ ಕೊರಗ ಜನಾಂಗಕ್ಕೆ ಜಾಗ ಗುರುತಿಸಲಾಗಿದ್ದು ಸುಮಾರು 8 ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಲಾಗಿದೆ ಉಳಿದ 21 ಮಂದಿ ಫಲಾನುಭವಿಗಳಿಗೆ ಕೂಡಲೇ ಕಲ್ಲಮುಂಡ್ಕೂರು ನಲ್ಲಿ ಜಾಗ ಗುರುತಿಸಿ ಹಕ್ಕುಪತ್ರ ನೀಡಲಾಗುವುದು.. ಹಿಂದುಳಿದ ವರ್ಗದವರನ್ನು ಸಮಾಜದ ಮುಖ್ಯ ವಾಹಿನಿಗೆ ಕರೆ ತರುವುದೇ ಮೂಲ ಉದ್ದೇಶವಾಗಿದ್ದು ಕೂಡಲೇ ಅವರಿಗೆ
ಸೂರು ಕಲ್ಪಿಸಲು ಮುಂದಾಗಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೊರಗ ಅಭಿವೃದ್ಧಿ ಸಂಘದ ಒಕ್ಕೂಟದ ಕರ್ನಾಟಕ ಕೇರಳ ವಿಭಾಗದ ಅಧ್ಯಕ್ಷೆ ಸುಶೀಲ ಮಾತನಾಡಿ ಸರಕಾರವು ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಮತ್ತಷ್ಟು ಪ್ರೋತ್ಸಾಹ ನೀಡಿ ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.
ವೇದಿಕೆಯಲ್ಲಿ ಮುಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸತೀಶ್ ಅಂಚನ್, ನ. ಪಂ ಮಾಜೀ ಅಧ್ಯಕ್ಷರುಗಳಾದ ಸುಭಾಷ್ ಶೆಟ್ಟಿ, ಸುನಿಲ್ ಆಳ್ವ ಮುಲ್ಕಿ ತಹಶಿಲ್ದಾರ್ ಶ್ರೀಧರ್ ಎಸ್,
ಮುಖ್ಯಾಧಿಕಾರಿ ಮಧುಕರ್, ಉಪತಹಶಿಲ್ದಾರ್ ದಿಲೀಪ್ ರೋಡ್ಕರ್, ಕಂದಾಯ ಅಧಿಕಾರಿ ಮೋಹನ್, ವಿ ಎ ಸುಜಿತ್ ,ಐಟಿಡಿಪಿ ಯೋಜನೆ ಸಮನ್ವಯ ಅಧಿಕಾರಿ ಬಸವರಾಜ, ಸಹಾಯಕ ನಿರ್ದೇಶಕ ಸುರೇಶ್, ತನಿಖಾಧಿಕಾರಿ ನಿಂಗರಾಜು, ಕೊರಗ ಅಭಿವೃದ್ಧಿ ಸಂಘದ ಕೋ ಆರ್ಡಿನೇಟರ್ ಕೆ. ಪುತ್ರನ್ ,ಮುಲ್ಕಿ ವಿಜಯ ರೈತ ಸೊಸೈಟಿ ಅಧ್ಯಕ್ಷ ರಂಗನಾಥ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸುಮಾರು ಎಂಟು ಮಂದಿ ಕೊರಗ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಲಾಯಿತು