ಕಡಂದಲೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಕಡಂದಲೆ ದೊಡ್ಡಮನೆ ಸತೀಶ್ ಡಿ ಶೆಟ್ಟಿ ಕೆಂಚನಕೆರೆ
Wednesday, May 14, 2025
ಮೂಡಬಿದ್ರೆ: ಸಮೀಪದ ಕಡಂದಲೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಕಡಂದಲೆ ದೊಡ್ಡಮನೆ ಸತೀಶ್ ಡಿ ಶೆಟ್ಟಿ ಕೆಂಚನಕೆರೆ ಆಯ್ಕೆಯಾಗಿದ್ದಾರೆ
ಕಡಂದಲೆ ದೊಡ್ಡಮನೆ ಸತೀಶ್ ಡಿ ಶೆಟ್ಟಿ ಕುಬೆವೂರು ಚಂದು ಛಾಯ ಕೆಂಚನಕೆರೆ ರವರು ಮುಲ್ಕಿ ಸಮೀಪದ ಕುಬೆವೂರು ಶ್ರೀ ಜಾರಂದಾಯ ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು ದೈವಸ್ಥಾನದ ಪ್ರತಿಯೊಂದು ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ
ನೂತನವಾಗಿ ಆಯ್ಕೆಯಾದ ಸತೀಶ್ ಶೆಟ್ಟಿ ರವರನ್ನು ಬೆಂಗಳೂರಿನ ಆಧ್ಯಾತ್ಮಿಕ ವಿಶ್ವಗುರು ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ,ಮುಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು, ಶಾಸಕ ಉಮಾನಾಥ ಕೋಟ್ಯಾನ್,ಮಾಜೀ ಸಚಿವ ಅಭಯ ಚಂದ್ರ ಜೈನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಉದ್ಯಮಿ ಅರವಿಂದ ಪೂಂಜಾ ಕಾರ್ನಾಡ್,ಶಿಮಂತೂರು ಆದಿ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಉದಯಕುಮಾರ್ ಶೆಟ್ಟಿ, ಮಾಜೀ ಮೊಕ್ತೇಸರ ಚಂದ್ರಹಾಸ ಶೆಟ್ಟಿ, ಶ್ರೀಕಾಂತ್ ಶೆಟ್ಟಿ, ಕೆಂಚನಕೆರೆ, ಬಾಬಾ ರಂಜನ್ ಶೆಟ್ಟಿ ಮಜಲ ಗುತ್ತು, ಉದಯಕುಮಾರ್ ಶೆಟ್ಟಿ ಅಧಿಧನ್ ಮುಲ್ಕಿ, ಜಯಕರ ಶೆಟ್ಟಿ ಮುಂಬೈ, ಸುಧೀರ್ ಶೆಟ್ಟಿ, ಶಿಮಂತೂರು, ಸುರೇಶ್ ಶೆಟ್ಟಿ, ವಿಶ್ವನಾಥ ಶೆಟ್ಟಿ ಚಂದ್ರಶೇಖರ ಶೆಟ್ಟಿ ಜೆಸಿ, ಸೀತಾರಾಮ ಶೆಟ್ಟಿ ಎಳತ್ತೂರು ಹಾಗೂ ಕುಬೆವೂರು ಶ್ರೀ ಜಾರಂದಾಯ ಸೇವಾ ಮಿತ್ರ ಮಂಡಳಿ ಮತ್ತು ಮಹಿಳಾ ಮಂಡಳಿಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ