ಕಾರಿಗೆ ಟ್ಯಾಂಕರ್ ಡಿಕ್ಕಿ,ಪೆರ್ಮುದೆಯಲ್ಲಿ ಘಟನೆ
Saturday, May 17, 2025
ಬಜಪೆ :ಕಾರಿಗೆ ಸೀವೇಜ್ ಟ್ಯಾಂಕರ್ ಡಿಕ್ಕಿಯಾದ ಘಟನೆ ಕಟೀಲು - ಬಜಪೆ ರಾಜ್ಯಹೆದ್ದಾರಿ 67 ರ ಪೆರ್ಮುದೆಯಲ್ಲಿ ನಡೆದಿದೆ.ಪೆರ್ಮುದೆ ಕಡೆಯಿಂದ ಬಜಪೆ ಕಡೆಗೆ ತೆರಳುತ್ತಿದ್ದ ಸೀವೇಜ್ ಟ್ಯಾಂಕರ್ ಪೆರ್ಮುದೆ ಕಡೆಗೆ ಬರುತ್ತಿದ್ದ ಕಾರಿಗೆ ಪೆರ್ಮುದೆಯ ಬಸ್ ನಿಲ್ದಾಣದ ಸಮೀಪ ಡಿಕ್ಕಿಯಾಗಿ ಹೆದ್ದಾರಿಯಂಚಿನಲ್ಲಿಯೇ ಉರುಳಿ ಬಿದ್ದಿದೆ.ಘಟನೆಯಲ್ಲಿ ಕಾರಿನ ಮುಂಭಾಗಕ್ಕೆ ಹಾನಿಯಾಗಿದೆ.
ಘಟನೆಯಿಂದ ಪೆರ್ಮುದೆ - ಬಜಪೆ ರಾಜ್ಯ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.ಘಟನಾ ಸ್ಥಳಕ್ಕೆ ಬಜಪೆ ಪೊಲೀಸರು ಭೇಟಿ ನೀಡಿದ್ದು,ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.