ಸುರಗಿರಿ ಸಂಸ್ಕಾರ ಶಿಬಿರ ಸಮಾರೋಪ
Saturday, May 17, 2025
ಕಿನ್ನಿಗೋಳಿ : ಬ್ರಾಹ್ಮಣ ಸಮಾಜ ಟ್ರಸ್ಟ್ ಹಾಗೂ ಶಿವಳ್ಳಿ ಸ್ಪಂದನ ಕಟೀಲು ವಲಯದ ಸಹಬಾಗಿತ್ವ ದಲ್ಲಿ ನಡೆದ 15 ದಿನಗಳ ಸಂಸ್ಕಾರ ಶಿಬಿರದ ಸಮಾರೋಪ ಸಮಾರಂಭ ಸುರಗಿರಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.
ವಿದ್ವಾನ್ ಅಂಗಡಿಮಾರ್ ವಿಶ್ವೇಶ ಭಟ್ ಆಶೀರ್ವಚನಗೈದರು. ಶಿಬಿರಾರ್ಥಿ ಗಳಾದ ಮನಿರತ್ನ,ಆರಾಧ್ಯ, ಸಾರ್ವಣಿ, ಕಾರ್ತಿಕ್ ಶಿಬಿರದಲ್ಲಿ ಕಲಿತ ಹಾಡು, ಭಜನೆ, ವಿಷ್ಣು ಸಹಸ್ರ ನಾಮ ಇತ್ಯಾದಿಗಳನ್ನು ಪ್ರಸ್ತುತಪಡಿಸಿದರು.
ಗುರುಗಳಾದ ರವೀಂದ್ರ ಭಟ್ ಅತ್ತೂರು ಮಾತಾಡಿ "ನಮ್ಮ ಭಾರತ ದೇಶವು ಪ್ರತೀ ನೂರು ಕಿಲೋಮೀಟರ್ ಗಳಿಗೆ ತನ್ನ ಪ್ರಕೃತಿ ಮತ್ತು ಸಂಸ್ಕಾರ ವನ್ನು ಬದಲಿಸುತ್ತದೆ, ಇದೇ ನಮ್ಮ ವೈಶಿಷ್ಟ್ಯ. ಅದನ್ನು ನಾವು ಉಳಿಸಿಕೊಳ್ಳಬೇಕು ಎಂದರು
ಸಾಮಾಜಿಕ ಕಾರ್ಯಕರ್ತ ಪಾರ್ಥಸಾರಥಿ ಪಂಜ, ಧಾರ್ಮಿಕ ದತ್ತಿ ಇಲಾಖೆಯ ದಕ್ಷಿಣ ಕನ್ನಡ ದ ಸದಸ್ಯ ಕೊರಿಯರ್ ಸುಬ್ರಮಣ್ಯ ಪ್ರಸಾದ್ ಜ್ಯೋತಿಷಿ ವಿಶ್ವನಾಥ್ ಭಟ್, ಕೋಡು ಶ್ರೀನಿವಾಸ್ ಭಟ್ ದೇವಿಕಾ ರಾವ್ ಪಡುಬಿದ್ರೆ ರಘುರಾಮ್ ಭಟ್ ಸುರಗಿರಿ ದೇವಸ್ಥಾನ ದ ಆಡಳಿತ ಮೊಕ್ತೇಸರ ಅರವಿಂದ ಭಟ್ ಕುದುಕೊಳ್ಳಿ, ಡಾ. ಗುರುರಾಜ ಉಡುಪ ಕಿಲೆಂಜೂರು ಸುರೇಶ್ ರಾಜ್ ಭಟ್ ಕೋಡು, ಭರತ್ ರಾವ್ ಪಕ್ಷಿಕೆರೆ, ಸುಧೀನ್ಡ್ರ ಉಡುಪ ಮಾಡ, ಸುಧೀನ್ಡ್ರ ಉಡುಪ ಬೈಲು
ಮತ್ತಿತರರಿದ್ದರು. ವೈಭವ್ ಭಟ್ ಉರ್ಮಿ ನಿರೂಪಿಸಿದರು.