ಭಟ್ರಕೆರೆಯಲ್ಲಿ ನೂತನ ರಿಕ್ಷಾ ಪಾರ್ಕ್ ಉದ್ಘಾಟನೆ
Saturday, May 17, 2025
ಬಜಪೆ :ಪೆರ್ಮುದೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಭಟ್ರಕೆರೆ ಎಂಬಲ್ಲಿ ನೂತನವಾಗಿ ನಿರ್ಮಾಣಗೊಂಡ ರಿಕ್ಷಾ ಪಾರ್ಕ್ ನ್ನು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಅವರು ಶನಿವಾರದಂದು ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು ರಿಕ್ಷಾ ಚಾಲಕ ಮಾಲಕರ ಕುಟುಂಬ ನಿರ್ವಹಣೆ ಹಾಗೂ ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಸರಕಾರದಿಂದ ಸಿಗುವ ಸವಲತುಗಳನ್ನು ತಮಗೆ ಪ್ರಾಮಾಣಿಕವಾಗಿ ಸಿಗುವಲ್ಲಿ ಪ್ರಯತ್ನಿಸುವೆ ಹಾಗೂ ತಾವುಗಳು ಅದರ ಪ್ರಯೋಜನವನ್ನು ಪಡೆದುಕೊಳ್ಳಿ ಎಂದರು.ಈ ಸಂದರ್ಭದಲ್ಲಿ
ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ಸಂಚಾಲಕ ಸಿರಾಜ್ ಬಜ್ಪೆ , ಪೆರ್ಮುದೆ ಗ್ರಾ ಪಂ ಉಪಾಧ್ಯಕ್ಷ ಸಂದೇಶ್ ,ಮುಲ್ಕಿ ಮೂಡಬಿದ್ರೆ ಐಟಿ ಸೆಲ್ ಅಧ್ಯಕ್ಷ ನಿಸಾರ್ ಕರಾವಳಿ ,ಗ್ರಾ ಪಂ ಸದಸ್ಯರಾದ ಸರೋಜ ,
ಸಾದಿಕ್ ,ಪೆರ್ಮುದೆ ಗ್ರಾ ಪಂ ಪಿಡಿಓ ರಮೇಶ್ ರಾಥೋಡ್ ,ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಸುಹೈಲ್ ,ದೀಪಕ್ ಪೆರ್ಮುದೆ ಉಪಸ್ಥಿತರಿದ್ದರು.