ಗುರುಪುರ ಗೋಳಿದಡಿಗುತ್ತುವಿನಲ್ಲಿ ಗುತ್ತುದ ಪರ್ಬೋ ,ಭಕ್ತರಿಗೆ ಕಲ್ಲಂಗಡಿ ಪ್ರಸಾದ
Friday, May 16, 2025
ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ರ ತನಕ ಜಿಲ್ಲೆಯ ವಿವಿಧ ತಂಡಗಳಿಂದ ಭಜನಾ
ಕಾರ್ಯಕ್ರಮ,ಮಧ್ಯಾಹ್ನ 2:30 ರಿಂದ ಸಂಜೆ 5 ರ ತನಕ ಪ್ರಜಾಪಿತ ಬ್ರಹ್ಮ ಕುಮಾರಿ ಈಶ್ವರೀಯ ವಿದ್ಯಾಲಯ ಮಂಗಳೂರು ಇವರಿಂದ ಯಕ್ಷಗಾನ ಶ್ರೀ ಶಿವ ಮಹಾತ್ಮೆ,ಸಂಜೆ 7 ರಿಂದ ರಾತ್ರಿ 7 ರ ತನಕ ಬೆಂಗಳೂರಿನ ವೇದಾಂತಿಗಳಾದ ಡಾ.ಬಿ.ವಿ ಕುಮಾರಸ್ವಾಮಿಯವರಿಂದ ಭಗವದ್ಗೀತಾ ಪ್ರವಚನ,ರಾತ್ರಿ 7ರಿಂದ 8 ರ ತನಕ ಕು.ರಶ್ಮಿ ರವಿಭಟ್ ಎರ್ಮಾಳ್ ಮತ್ತು ಅಕ್ಷತಾ ಬೈಕಾಡಿಯವರಿಂದ ಭರತನಾಟ್ಯ ಹಾಗೂ ರಾತ್ರಿ 8 ರಿಂದ 10 ತನಕ ಸನಾತನ ನಾಟ್ಯಾಲಯ ಮಂಗಳೂರು ಇವರಿಂದ ಸನಾತನ ನೃತ್ಯಾಂಜಲಿ ಭರತನಾಟ್ಯ ಕಾರ್ಯಕ್ರವು ನಡೆಯಿತು.
ಪರ್ಬೊ ಗೆ ಆಗಮಿಸಿದ ಮಹಿಳೆಯರಿಗೆ ಗಾಜಿನ ಬಳೆಗಳನ್ನು ತೊಡಿಸಲು ಪ್ರತ್ಯೇಕವಾದ ವ್ಯವಸ್ಥೆಯನ್ನು ಮಾಡಲಾಗಿದ್ದು,ಗುರುಪುರ ಗೋಳಿದಡಿ ಗುತ್ತಿನ ಪರ್ಬೊ ಗೆ ಇದು ವಿಶೇಷವಾದ ಮೆರುಗನ್ನು ನೀಡಿತ್ತು.ಅಲ್ಲದೆ ಆಗಮಿಸಿದ ಎಲ್ಲಾ ಭಕ್ತಾಧಿಗಳಿಗೂ ಕಲ್ಲಂಗಡಿ ಹಣ್ಣ ನ್ನು ಪ್ರಸಾದವಾಗಿ ನೀಡಲಾಯಿತು.
ಈ ಸಂದರ್ಭ ಗುರುಪುರ ಗೋಳಿದಡಿಗುತ್ತಿನ ಗಡಿಕಾರರಾದ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ,ಶ್ರೀಗುರು ಮಹಾಕಾಲೇಶ್ವರ ರಿಲೀಜಿಯಸ್ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ) ನ ಕಾರ್ಯದರ್ಶಿ ಉಷಾ ಪ್ರಸಾದ ಶೆಟ್ಟಿ ,ಪ್ರಮುಖರುಗಳು ಹಾಗೂ ಭಕ್ತರು ಉಪಸ್ಥಿತರಿದ್ದರು.