ಗುರುಪುರ ಜಂಗಮ ಮಠದಲ್ಲಿ ತಾಂಬೂಲ ಪ್ರಶ್ನೆ
Wednesday, May 28, 2025
ಕೈಕಂಬ:ಗುರುಪುರದ ಶ್ರೀ ಜಂಗಮ ಮಠ ಸಂಸ್ಥಾನದ ಜೀರ್ಣೋದ್ಧಾರ ಪ್ರಯುಕ್ತ ಶ್ರೀ ರುದ್ರಮುನಿ ಸ್ವಾಮೀಜಿ ಉಪಸ್ಥಿತಿಯಲ್ಲಿ ಗುರುಪುರ ಜಂಗಮ ಮಠದಲ್ಲಿ ತಾಂಬೂಲ ಪ್ರಶ್ನೆ ನಡೆಯಿತು.
ಶಕ್ತಿನಗರದ ಸಿ. ವಿ. ಪೊದುವಾಳ್ ಅವರು ಬೆಳಿಗ್ಗೆ 9ರಿಂದ ಸಂಜೆ 4:30ರವರೆಗೆ ತಾಂಬೂಲ ಪ್ರಶ್ನೆ ನಡೆಸಿಕೊಟ್ಟರು. ಜಂಗಮ ಮಠದ ಜೀರ್ಣೋದ್ಧಾರಕ್ಕೆ ಇದು ಸೂಕ್ತ ಕಾಲ. ಮುಂದಿನ 2 ವರ್ಷದ ಅವಧಿಯಲ್ಲಿ ಶ್ರೀ ದೇವರ ಅನುಗ್ರಹದಂತೆ ಈ ಕ್ಷೇತ್ರ ಬೆಳಗಲಿದೆ. ಇಲ್ಲಿ ಶ್ರೀ ಚೌಡೇಶ್ವರಿ(ದುರ್ಗಾಪರಿಮೇಶ್ವರಿ) ದೇವರ ಸಾನಿಧ್ಯ ಬೆಳಗಬೇಕು. ಜೊತೆಗೆ ಶ್ರೀ ಮಹಾಗಣಪತಿ ಮತ್ತು ಶ್ರೀ ಕ್ಷೇತ್ರದ ನೀಲಕಂಠ ದೇವರ ಜೀರ್ಣೋದ್ಧಾರವಾಗಬೇಕು. ಪೂರ್ವತಯಾರಿ ನೆಲೆಯಲ್ಲಿ ಮಠದಲ್ಲಿ 108 ಸೀಯಾಳಾಭಿಷೇಕ ಹಾಗೂ ಇತರ ಕೆಲವು ಪರಿಹಾರ ಪೂಜಾ ವಿಧಿವಿಧಾನಗಳು ನಡೆಯಬೇಕು ಎಂಬ ಸೂಚನೆ ನೀಡಿದರು.
ಕಾರ್ಯಕ್ರಮದಲ್ಲಿ ಗುರುಪುರ ಕಾರಮೊಗರುವಿನ ಶ್ರೀ ಅಗ್ನಿದುರ್ಗಾ ಗೋಪಾಲಕೃಷ್ಣ ಕಾಲಭೈರವ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ. ರವಿರಾಜ ಶೆಟ್ಟಿ ಕಾರಮೊಗರುಗುತ್ತು, ಸಚಿನ್ ಅಡಪ ಬಡಕರೆಗುತ್ತು, ಪುರಂದರ ಮಲ್ಲಿ ದೋಣಿಂಜೆಗುತ್ತು, ರವೀಂದ್ರ ಶೆಟ್ಟಿ ಬೆಳ್ಳೂರುಗುತ್ತು, ಸತೀಶ್ ಕಾವ ಬೆಳ್ಳಿಬೆಟ್ಟುಗುತ್ತು, ಚಂದ್ರಹಾಸ ಪೂಜಾರಿ ಕೌಡೂರು ಭಂಡಾರಮನೆ, ಸಚಿನ್ ಶೆಟ್ಟಿ ಮಠದಬೈಲು, ರಾಜೇಶ್ ಶೆಟ್ಟಿ ಮಠದಬೈಲು, ಶ್ಯಾಮರಾಯ ಆಚಾರ್ಯ ಗುರುಪುರ, ಸೀತಾರಾಮ ಪೂಜಾರಿ ಕರಿಮನೆ, ಪಂಚಾಯತ್ ಸದಸ್ಯರಾದ ರಾಜೇಶ್ ಸುವರ್ಣ, ಸುನಿಲ್ ಪೂಜಾರಿ ಜಲ್ಲಿಗುಡ್ಡೆ, ನಳಿನಿ ಶೆಟ್ಟಿ, ಉದ್ಯಮಿ ರಮಾನಂದ ಶೆಟ್ಟಿ ಮಠದಬೈಲು, ಡೊಂಬಯ್ಯ ಪೂಜಾರಿ ಭಂಡಾರಮನೆ, ಚಂದ್ರಹಾಸ ಕಾವ ಮೊಗೇರುಗುತ್ತು, ವಿನಯ ಸುವರ್ಣ, ಹರೀಶ್ ಶೆಟ್ಟಿ ತೋಕಾಲ, ಶ್ರೀಕರ ವಿ. ಶೆಟ್ಟಿ ಗುರುಪುರ, ರತ್ನಾಕರ ಜಿ, ಜಲಜಾಕ್ಷಿ ಗುರುಪುರ, ಶರತ್ ಶೆಟ್ಟಿ ಗುರುಪುರ, ದೀಪಕ್ ಪೂಜಾರಿ ಗುರುಪುರ, ಮಧುರಾಜ್ ಗುರುಪುರ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.