ದಿ. ನವೀನ್ ಮಿಜಾರು ಇವರ 6ನೇ ವರ್ಷದ ಪುಣ್ಯಸ್ಮರಣೆ, ರಕ್ತದಾನ ಶಿಬಿರ ಮತ್ತು ಉಚಿತ ಪುಸ್ತಕ ವಿತರಣೆ
Wednesday, May 28, 2025
ಕೈಕಂಬ : ವಾಮಂಜೂರು ಟೈಗರ್ಸ್ ವತಿಯಿಂದ ಎ.ಜೆ ಆಸ್ಪತ್ರೆ ರಕ್ತನಿಧಿ ಇದರ ಸಹಯೋಗದಲ್ಲಿ ದಿ. ನವೀನ್ ಮಿಜಾರು ಇವರ 6ನೇ ವರ್ಷದ ಪುಣ್ಯಸ್ಮರಣೆ ಪ್ರಯುಕ್ತ ವಾಮಂಜೂರಿನ ಶ್ರೀ ರಾಮ ಭಜನಾ ಮಂದಿರದಲ್ಲಿ ರಕ್ತದಾನ ಶಿಬಿರ ಮತ್ತು ಉಚಿತ ಬರೆಯುವ ಪುಸ್ತಕ ವಿತರಣೆ ಕಾರ್ಯಕ್ರಮ ನಡೆಯಿತು.
ಮಂಗಳೂರು ಮಹಾನಗರ ಪಾಲಿಕೆಯ ವಾಮಂಜೂರು ತಿರುವೈಲು ವಾರ್ಡ್‍ನ ನಿಕಟಪೂರ್ವ ಕಾರ್ಪೊರೇಟರ್ ಹೇಮಲತಾ ಆರ್. ಸಾಲ್ಯಾನ್ ಮಾತನಾಡಿ, ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿರುವ ಟೈಗರ್ಸ್ ಸಂಘಟನೆಯ ಕಾರ್ಯ ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ತಿರುವೈಲು ಸರ್ಕಾರಿ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕ ಗೋಪಾಲ್ ಯು. ಮಾತನಾಡಿದರು.
ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಮಾ. ರಶ್ಮಿತ್ ಡಿ. ಬಂಗೇರ ಅವರನ್ನು ಸನ್ಮಾನಿಸಲಾಯಿತು. ಹಿಂದೂ ಸಂಘಟನೆಯ ಮುಖಂಡ ಸಾಕ್ಷಾತ್ ಶೆಟ್ಟಿ, ವಾಮಂಜೂರು ಟೈಗರ್ಸ್ ಅಧ್ಯಕ್ಷ ಸುರೇಶ್, ಮಾಜಿ ಕಾರ್ಪೊರೇಟರ್ ಜಯಪ್ರಕಾಶ್(ಜೆಪಿ), ಎ.ಜೆ. ಆಸ್ಪತ್ರೆಯ ಡಾ. ಜಸ್ಪ್ರೀತ್, ದಿ. ನವೀನ್ ಮಿಜಾರು ಅವರ ಸಹೋದರರಾದ ಪ್ರವೀಣ್ ಮತ್ತು ಚೇತನ್, ಎಡಪದವು ಬಜರಂಗ ದಳದ ಮುಖಂಡ ಪ್ರದೀಪ್, ಕಾಂಗ್ರೆಸ್ ಮುಖಂಡ ಪದ್ಮನಾಭ ಕೋಟ್ಯಾನ್(ಬಿಎಲ್‍ಪಿ), ಉದ್ಯಮಿ ರಘು ಸಾಲ್ಯಾನ್, ಟೈಗರ್ಸ್‍ನ ಪದಾಧಿಕಾರಿಗಳು ಮತ್ತು ಸದಸ್ಯರು, ವಿದ್ಯಾರ್ಥಿಗಳು, ಹಿತೈಷಿಗಳು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಸ್ಥಳೀಯ 350 ಮಕ್ಕಳಿಗೆ ಉಚಿತ ಬರೆಯುವ ಪುಸ್ತಕ ವಿತರಿಸಲಾಯಿತು. 50ಕ್ಕೂ ಅಧಿಕ ಮಂದಿ ರಕ್ತದಾನ ಮಾಡಿದರು. ವಿಜೆ ಮಧುರಾಜ್ ಗುರುಪುರ ಕಾರ್ಯಕ್ರಮ ನಿರೂಪಿಸಿದರು.