-->
"ಕರಾವಳಿಯ ಜನರಿಗೆ ಗೌರವಯುತವಾಗಿ ಬದುಕುವ ಗ್ಯಾರಂಟಿ ಕೊಡಿ" ಪೊಲೀಸ್ ವೈಫಲ್ಯದ ವಿರುದ್ಧ ಇನಾಯತ್ ಆಲಿ ಆಕ್ರೋಶ

"ಕರಾವಳಿಯ ಜನರಿಗೆ ಗೌರವಯುತವಾಗಿ ಬದುಕುವ ಗ್ಯಾರಂಟಿ ಕೊಡಿ" ಪೊಲೀಸ್ ವೈಫಲ್ಯದ ವಿರುದ್ಧ ಇನಾಯತ್ ಆಲಿ ಆಕ್ರೋಶ

ಮಂಗಳೂರು:ಅಮಾಯಕ ಯುವಕನ ಕೊಲೆಗೆ ದಕ್ಷಿಣ ಕನ್ನಡ ಜಿಲ್ಲೆ ಬೆಚ್ಚಿ ಬಿದ್ದಿದೆ. ಜಿಲ್ಲೆಯಲ್ಲಿ ಇತ್ತೀಚೆಗೆ ನಡೆಯುತ್ತಿರುವ ಅಹಿತಕರ, ಕೋಮು ಸಂಘರ್ಷ  ಹುಟ್ಟು ಹಾಕುವಂತಹ ಘಟನೆಗಳು ಜಿಲ್ಲೆಯ ಜನರ ನೆಮ್ಮದಿಯನ್ನು ಹಾಳುಗೆಡಹಿದೆ. ಶಾಂತಿಯ ವಾತಾವರಣವನ್ನು ಕೆಡಿಸಿ ಆ ಮೂಲಕ ರಾಜಕೀಯ ಲಾಭ ಪಡೆದುಕೊಳ್ಳುವ ಹುನ್ನಾರಗಳ ಭಾಗವಾಗಿ ಇಂತಹ ಘಟನೆಗಳು ಮರುಕಳಿಸುತ್ತಿವೆ ಎಂದು
 ಕೆಪಿಸಿಸಿ ಪ್ರಧಾನ  ಕಾರ್ಯದರ್ಶಿ ಇನಾಯತ್  ಆಲಿ  ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಯೊಂದು ಘಟನೆಗಳು ನಡೆದಾಗಲೂ ಅದನ್ನು ಸರಕಾರಕ್ಕೆ ತಲುಪಿಸುವಂಹ ಕೆಲಸ ನಡೆದರೂ ರಾಜ್ಯದ ಗೃಹ ಇಲಾಖೆ ಈ ಬಗ್ಗೆ ಗಮನ  ಹರಿಸಿಲ್ಲ. ಕಠಿಣ ಕಾನೂನು ಕ್ರಮ ಕೈಗೊಳ್ಳುವ ಭರವಸೆಗಳು ಒಂದೂ ಈಡೇರಿಲ್ಲ. ಹಾಗಾಗಿ, ಇನ್ನಾದರೂ ಕರಾವಳಿಯ ಈ ನೆತ್ತರ ರಾಜಕೀಯ ಕೊನೆಯಾಗಬೇಕಿದೆ. 

ಸರಕಾರ ದ್ವೇಷ ಭಾಷಣಕಾರರು ಮತ್ತು ಕೋಮು ಪ್ರಚೋದನೆ ಮಾಡುವ ದುಷ್ಟ ಶಕ್ತಿಗಳ ವಿರುದ್ಧ ಅತ್ಯಂತ ಕಠಿಣ ಕ್ರಮ ಜರುಗಿಸಿ ಇಲ್ಲಿನ ಜನರಿಗೆ ಮಿಕ್ಕ ಎಲ್ಲಾ ಗ್ಯಾರಂಟಿಗಳಿಗಿಂತ ಹೊರತಾಗಿ ಮೊದಲು ಗೌರವಯುತವಾಗಿ, ನೆಮ್ಮದಿಯಿಂದ ಬದುಕುವ ಗ್ಯಾರಂಟಿಯನ್ನು, ಶಾಂತಿಯುತ ವಾತಾವರಣವನ್ನು ನಿರ್ಮಿಸಿ ಕೊಡಬೇಕು. ಈ ಕೊಲೆ ಕೃತ್ಯಗಳ ಮೂಲ ಪತ್ತೆ ಹಚ್ಚಿ, ಅದಕ್ಕೆ ಕುಮ್ಮಕ್ಕು ನೀಡುವಂತಹ ಶಕ್ತಿಗಳ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆದು ತಪ್ಪಿತಸ್ಥರಿಗೆ ಕಠಿಣ ಕಾನೂನು ಶಿಕ್ಷೆ ಆಗಬೇಕು ಎಂದರು.

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ