ಸ್ಪೋರ್ಟಿಂಗ್ ಕ್ಲಬ್ (ರಿ) ಬಜ್ಪೆ ವತಿಯಿಂದ ಶಾಲಾ ಮಕ್ಕಳಿಗೆ ಪುಸ್ತಕ,ಬ್ಯಾಗ್ ವಿತರಣೆ
Thursday, May 29, 2025
ಬಜಪೆ:ಸ್ಪೋರ್ಟಿಂಗ್ ಕ್ಲಬ್ (ರಿ) ಬಜ್ಪೆ ವತಿಯಿಂದ ಬಜ್ಪೆ ವಠಾರದ ಬಡ ಶಾಲಾ ಮಕ್ಕಳಿಗೆ ಪುಸ್ತಕ ಮತ್ತು ಶಾಲಾ ಬ್ಯಾಗ್ ವಿತರಣಾ ಕಾರ್ಯಕ್ರಮವು
ಬಜ್ಪೆ ಯ ಝರಾ ಸೆಂಟರ್ ಹಾಲ್ ನಲ್ಲಿ ನಡೆಯಿತು.ಬಜ್ಪೆ ಸ್ಪೋರ್ಟಿಂಗ್ ಕ್ಲಬ್ ನ ವತಿಯಿಂದ ಪ್ರತಿವರ್ಷ ಕ್ರಿಕೆಟ್ ಟೂರ್ನಮೆಂಟ್ ಆಯೋಜಸುವ ಮೂಲಕ ದಾನಿಗಳಿಂದ ಸಂಗ್ರಹವಾದ ಹಣವನ್ನು ಬಜ್ಪೆ ಪರಿಸರದ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಬೇಕಾದ ಪುಸ್ತಕಗಳು ಮತ್ತು ಶಾಲಾ ಬ್ಯಾಗ್ ಗಳನ್ನು ಕೊಟ್ಟು ಊರ ನಾಗರಿಕರ ಪ್ರಶಂಸೆಗೆ ಪಾತ್ರವಾಗಿದ್ದು,ಬಜ್ಪೆ ಸ್ಪೋರ್ಟಿಂಗ್ ಕ್ಲಬ್ (ರಿ) ನ ಯುವಕರು ಇತರ ಸಂಘ ಸಂಸ್ಥೆಗಳಿಗೆ ಮಾದರಿ
ಯಾಗಿದ್ದಾರೆ .
ಈ ಸಂದರ್ಭದಲ್ಲಿ ಬಜ್ಪೆ ಪೊಲೀಸ್ ಸರ್ಕಲ್ ಇನ್ಸ್ಫೆಕ್ಟರ್ ಸಂದೀಪ್ ,ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ಸಂಚಾಲಕ ಸಿರಾಜ್ ಬಜ್ಪೆ ,ಕ್ಲಬ್ ನ ಅಧ್ಯಕ್ಷ ಅಝರುದ್ದೀನ್,ಎಸ್ ಡಿ ಪಿ ಐ ಮುಖಂಡ ಇಂಜಿನಿಯರ್ ಇಸ್ಮಾಯಿಲ್ .ಮುಲ್ಕಿ ಮೂಡಬಿದ್ರೆ ಐಟಿ ಸೆಲ್ ಅಧ್ಯಕ್ಷ ನಿಸಾರ್ ಕರಾವಳಿ, ಅಲ್ ಹಿಕ್ಮ ಸಂಸ್ಥೆಯ ಷರೀಫ್ ರಯಾನ್ ಅಖ್ತರ್ ,ಉದ್ಯಮಿ ಮ್ಯಾಕ್ಬೂಲ್,
ಸುಮಿತ್ ,ಮುತಾಲಿಫ್ ,ಹಿರಿಯರಾದ ಮೊನಕ ಅಬೂಬಕ್ಕರ್ ಹಾಗೂ ಮತ್ತಿತರರು ಇದ್ದರು.