
ಎ.26 :ಎಕ್ಕಾರಿನಲ್ಲಿ 19 ನೇ ವರ್ಷದ ಸಾರ್ವಜನಿಕ ಸತ್ಯನಾರಾಯಣ ಪೂಜೆ
Thursday, April 24, 2025
ಬಜಪೆ:ದುರ್ಗಾ ಕಲ್ಚರಲ್ & ಕ್ರಿಕೆಟ್ ಕ್ಲಬ್ (ರಿ) ಹಾಗೂ ಶ್ರೀದುರ್ಗಾ ಮಹಿಳಾ ಮಂಡಳಿ ಎಕ್ಕಾರು ಇವರ ಜಂಟಿ ಆಶ್ರಯದಲ್ಲಿ ಎ.26 ರ ಶನಿವಾರದಂದು ಸಂಜೆ 6:30 ರಿಂದ ಎಕ್ಕಾರು ತಾಂಗಾಡಿ ಕಟ್ಟೆಯಲ್ಲಿ ಡಾ.ಪದ್ಮನಾಭ ಭಟ್ ಎಕ್ಕಾರು ಇವರ ನೇತೃತ್ವದಲ್ಲಿ 19 ನೇ ವರ್ಷದ ಸಾರ್ವಜನಿಕ ಶ್ರೀಸತ್ಯನಾರಾಯಣ ಪೂಜೆಯು ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.ಅಂದು ಸಂಜೆ 6 ರಿಂದ ದುರ್ಗಾ ಬಾಲಗೋಕುಲ ಮಕ್ಕಳಿಂದ ಕುಣಿತ ಭಜನೆ ಹಾಗೂ ಪೂಜೆಯ ಬಳಿಕ ಅನ್ನ ಸಂತರ್ಪಣೆ ನಡೆಯಲಿದೆ.