ರಾಮ್ ಫ್ರೆಂಡ್ಸ್( ರಿ) ಕಟೀಲು, ಆರೋಗ್ಯ ಸೇವಾ ನಿಧಿ ಅಭಿಯಾನ,ಚಿಕಿತ್ಸೆಗೆ ನೆರವು
ಕಟೀಲು:ರಾಮ್ ಫ್ರೆಂಡ್ಸ್( ರಿ) ಕಟೀಲು ತಂಡವು ಪೊಳಲಿ ರಾಜರಾಜೇಶ್ವರಿ ಅಮ್ಮನವರ ಜಾತ್ರಾ ಸಂದರ್ಭದಲ್ಲಿ ಆರೋಗ್ಯ ಸೇವಾ ನಿಧಿ ಅಭಿಯಾನವು ನಡೆಯಿತು.ಈ ಅಭಿಯಾನದಲ್ಲಿ ಸಂಗ್ರಹವಾದ ಮೊತ್ತವನ್ನು ಮಂಗಳೂರು ಪಚ್ಚನಾಡಿ ನಿವಾಸಿಯಾಗಿರುವ ತನುಷ್(4 ವರ್ಷ) ಎಂಬ ಮಗುವಿಗೆ ಕಿವಿಯ ಸಾಧನವನ್ನು ಅಳವಡಿಸಲು ಚಿಕಿತ್ಸೆಗೆ ನೀಡಲಾಯಿತು. ತಂಡದ ಸೇವಾ ಬಂಧುಗಳು ಹಾಗೂ ಕ್ಷೇತ್ರಕ್ಕೆ ಆಗಮಿಸಿದ ಭಕ್ತರು ಸಹಕರಿಸಿದ ಮೊತ್ತವನ್ನು ಪೊಳಲಿ ರಾಜರಾಜೇಶ್ವರಿ ಅಮ್ಮನವರ ಕ್ಷೇತ್ರದಲ್ಲಿ ಪ್ರಧಾನ ಅರ್ಚಕ ರಾಮ್ ಭಟ್ ಪೊಳಲಿ ಯವರು 64,000 ರೂಪಾಯಿಯ ಚೆಕ್ಕನ್ನು ಮಗುವಿಗೆ ಹಸ್ತಾಂತರಿಸಿದರು. ಈ ಸಂದರ್ಭ ಕ್ಷೇತ್ರದ ಆಡಳಿತದ ಮಂಡಳಿಯ ಅಧಿಕಾರಿ ನಾಗೇಶ್ ಪೊಳಲಿ, ತಂಡದ ಸ್ಥಾಪಕಾಧ್ಯಕ್ಷ ರಮಾನಂದ ಪೂಜಾರಿ ಕಟೀಲು, ಅಧ್ಯಕ್ಷ ಸುಮಂತ್ ಸುವರ್ಣ ಬಡಗಮಿಜಾರು, ಉಪಾಧ್ಯಕ್ಷ ರಾಕೇಶ್ ಪೊಳಲಿ, ಸದಸ್ಯರಾದ , ಗುರುಪ್ರಸಾದ್ ಮುಲ್ಕಿ , ನಿರಂಜನ್ ಕರ್ಕೇರ , ರಾಕೇಶ್ ಬಜ್ಪೆ,ನಾಗೇಶ್, ದಿನೇಶ್, ರೂಪೇಶ್, ಅಜಿತ್ ಆಚಾರ್ಯ ಉಪಸ್ಥಿತರಿದ್ದರು.