-->

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಕಿನ್ನಿಗೋಳಿ ಘಟಕದ ಉದ್ಘಾಟನೆ

ಕಟೀಲು ವರ್ಷಾವಧಿ ಜಾತ್ರೆ

ಕಟೀಲು ವರ್ಷಾವಧಿ ಜಾತ್ರೆ
ಎ.13 ರಿಂದ ಎ.20 ರವರೆಗೆ ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆ
ಮೂಡುಕೊಟ್ರಪಾಡಿಗುತ್ತು ಶ್ರೀಲಕ್ಷ್ಮೀಜನಾರ್ದನ ದೇವರ ಅಷ್ಟಬಂಧ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

ಮೂಡುಕೊಟ್ರಪಾಡಿಗುತ್ತು ಶ್ರೀಲಕ್ಷ್ಮೀಜನಾರ್ದನ ದೇವರ ಅಷ್ಟಬಂಧ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

ಕಿನ್ನಿಗೋಳಿ:ಸುಮಾರು 800 ವರ್ಷಗಳ ಇತಿಹಾಸವಿರುವ ಕುದ್ರಿಪದವು ಸಮೀಪದ ಕೊಡ್ಸರಾಳ್ವ ಸಿರಿಮನೆತನದ ಮೂಡುಕೊಟ್ರಪಾಡಿಗುತ್ತು ಶ್ರೀ ಲಕ್ಷ್ಮೀಜನಾರ್ದನ ಶ್ರೀಬ್ರಹ್ಮಲಿಂಗೇಶ್ವರ ಹಾಗೂ ಸಪರಿವಾರ ಕ್ಷೇತ್ರದಲ್ಲಿ ಎ.19 ರಿಂದ ಎ.25 ರ ತನಕ ಶಿಬರೂರು ಬ್ರಹ್ಮಶ್ರೀ ವೇದವ್ಯಾಸ ತಂತ್ರಿ ಹಾಗೂ ವೈದಿಕ ವಿದ್ವಾಂಸರಿಂದ ವಿವಿಧ ಧಾರ್ಮಿಕ ಕಾರ್ಯಗಳೊಂದಿಗೆ ಅಷ್ಟಬಂಧ  ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ  ಮತ್ತು ವಾರ್ಷಿಕ ಜಾತ್ರಾ ಮಹೋತ್ಸವವು ಜರುಗಲಿದೆ.ಎ.23 ರ ಬುಧವಾರ ಬೆಳಿಗ್ಗೆ 7 ರಿಂದ  ವಿಷ್ಣುಯಾಗ,9:15 ಕ್ಕೆ ಒದಗುವ ವೃಷಭ ಲಗ್ನ ಸುಮುಹೂರ್ತದಲ್ಲಿ ಬ್ರಹ್ಮಕಲಶಾಭಿಷೇಕ,ಮಂತ್ರಾಕ್ಷತೆ,ಧ್ವಜಾರೋಹಣ,ಮಹಾಪೂಜೆ ,ಪಲ್ಲಪೂಜೆ ಹಾಗೂ ಮಧ್ಯಾಹ್ನ 12:30 ರಿಂದ  ಅನ್ನ ಸಂತರ್ಪಣೆ ನಡೆಯಲಿದೆ.ಮಧ್ಯಾಹ್ನ 12 ರಿಂದ 2 ರ ತನಕ ಭಜನಾ ಪ್ರಿಯ ಭಜನಾ ಮಂಡಳಿ ಮೂಲ್ಕಿ ಇವರಿಂದ ಭಜನಾ ಸೇವೆ,ಮಧ್ಯಾಹ್ನ 2 ರಿಂದ 4 ರ ತನಕ ಧೀರಜ್ ರೈ ಸಂಪಾಜೆ ಯವರ ಸಾರಥ್ಯದಲ್ಲಿ  ಯಕ್ಷ ತೆಲಿಕೆ ,ಯಕ್ಷ ದಿಗ್ಗಜರಿಂದ ಹಾಸ್ಯ ರಸಧಾರೆ,ಸಂಜೆ 4:30 ರಿಂದ 6:30 ರ ತನಕ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಯವರಿಂದ ಯಕ್ಷವೈಭವ ಕಾರ್ಯಕ್ರಮ ಹಾಗೂ ರಾತ್ರಿ 8:30ರಿಂದ ಧಾರ್ಮಿಕ ಸಭಾ ಕಾರ್ಯಕ್ರಮವು ನಡೆಯಲಿದೆ.ಕಾರ್ಯಕ್ರಮದಲ್ಲಿ  ಶ್ರೀಕ್ಷೇತ್ರ ಒಡಿಯೂರು  ಶ್ರೀ ಗುರುದೇವಾನಂದ ಸ್ವಾಮೀಜಿ,,ಶ್ರೀಕ್ಷೇತ್ರ ಕೇಮಾರಿನ ಈಶ ವಿಠಲದಾಸ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ಬ್ರಹ್ಮಶ್ರೀ ವೇದವ್ಯಾಸ ತಂತ್ರಿಗಳು,ಕ್ಷೇತ್ರದ ಅರ್ಚಕ ಪುರುಷೋತ್ತಮ ಭಟ್  ಗೌರವ ಉಪಸ್ಥಿತಲಿರುವರು.ಧಾರ್ಮಿಕ ಚಿಂತಕರಾದ ವಿದ್ವಾನ್ ಪಂಜ ಭಾಸ್ಕರ್ ಭಟ್  ಅವರು ಧಾರ್ಮಿಕ ಉಪನ್ಯಾಸವನ್ನು ನೀಡಲಿದ್ದಾರೆ.ಸಂಸದ ಕ್ಯಾ.ಬೃಜೇಶ್ ಚೌಟ,ಶಾಸಕ ಉಮಾನಾಥ ಕೋಟ್ಯಾನ್ ,ಮಾಜಿ ಸಚಿವ ಅಭಯಚಂದ್ರ ಜೈನ್ ,ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ  ಹಾಗೂ ಪ್ರಮುಖರುಗಳು,ಗಣ್ಯಾತೀಗಣ್ಉರು ಕಾರ್ಯಕ್ರಮದಲ್ಲಿ ಉಪಸ್ಥಿತಲಿರುವರು.ಎ.23 ರ ಬುಧವಾರ ಧ್ವಜರೋಹಣದೊಂದಿಗೆ  ಎ.25 ರವರೆಗೆ ವಾರ್ಷಿಕ ಜಾತ್ರಾ ಮಹೋತ್ಸವವು ನಡೆಯಲಿದೆ.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ