ಹಳೆಯಂಗಡಿ ಬೊಳ್ಳೂರು ಲಿಯಾವುಲ್ ಇಸ್ಲಾಂ ದಫ್ಫ್ ಕಮಿಟಿ ನೂತನ ಸಮಿತಿ ರಚನೆ: ಅಧ್ಯಕ್ಷರಾಗಿ ಅಝೀಝ್ ಕಾಪಿಕ್ಕಾಡ್ ಆಯ್ಕೆ
Tuesday, April 22, 2025
ಹಳೆಯಂಗಡಿ: ಮುಹಿಯುದ್ದೀನ್ ಜುಮ್ಮಾ ಮಸೀದಿ ಬೊಳ್ಳೂರು ಹಳೆಯಂಗಡಿ ಇದರ ಉಪ ಸಮಿತಿಯಾದ ಲಿಯಾವುಲ್ ಇಸ್ಲಾಂ ದಫ್ಫ್ ಕಮಿಟಿ ಬೊಳ್ಳೂರು ಹಳೆಯಂಗಡಿ ಇದರ ಮಹಾಸಭೆಯು ಸೋಮವಾರ ಸಮಿತಿಯ ಕಚೇರಿಯಲ್ಲಿ ಜಮಾಅತ್ ಅಧ್ಯಕ್ಷ ಪಂಡಿತ್ ಬಿ.ಎ.ಇದ್ದಿನಬ್ಬ ಹಾಜಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ವೇಳೆ 2024 - 25 ನೇ ಸಾಲಿನ ಆಯವ್ಯಯ ಮಂಡಣೆ ಹಾಗೂ 2025-26ನೇ ಸಾಲಿನಲ್ಲಿ ಸಂಸ್ಥೆಯಿಂದ ನಡೆಸಬೇಕಾಗಿರುವ ಸಾಮಾಜಿಕ ಕಾರ್ಯಕ್ರಮಗಳ ಕುರಿತು ಚರ್ಚೆಗಳು ನಡೆಯಿತು. ಇದೇ ಸಂದರ್ಭ 2025-26ನೇ ಸಾಲಿನ ನೂತನ ಸಮಿತಿಯನ್ನು ನೇಮಕ ಮಾಡಲಾಯಿತು.
ನೂತನ ಅಧ್ಯಕ್ಷರಾಗಿ ಅಝೀಝ್ ಕಾಪಿಕ್ಕಾಡ್, ಉಪಾಧ್ಯಕ್ಷರಾಗಿ ಯೂಸುಫ್ ಪದ್ಮನೂರು, ಕಾರ್ಯದರ್ಶಿಯಾಗಿ, ಹುಸೈನಬ್ಬ ಬೊಳ್ಳೂರು, ಜೊತೆ ಕಾರ್ಯದರ್ಶಿಗಳಾಗಿ ಬಿ.ಎಂ. ಅಬ್ದುಲ್ ರಹಮಾನ್, ಅಹಮದ್ ಬಾವ(ಮದನಿ) ಹಾಗೂ ಲೆಕ್ಕಪರಿಶೋಧಕರಾಗಿ ಹನೀಫ್ ಬೊಳ್ಳೂರು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರ ನೇಮಕ ಮಾಡಲಾಯಿತು.