-->
ಕಟೀಲು ವರ್ಷಾವಧಿ ಜಾತ್ರೆ ಸಂಪನ್ನ

ಕಟೀಲು ವರ್ಷಾವಧಿ ಜಾತ್ರೆ ಸಂಪನ್ನ

ಕಟೀಲು:ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವದ ಅಂಗವಾಗಿ  ಭಾನುವಾರ ರಾತ್ರಿ ಆರಟ ರಥೋತ್ಸವ,ಶಿಬರೂರು ಶ್ರೀಕೊಡಮಣಿತ್ತಾಯ ದೈವದ ಭೇಟಿ ಹಾಗೂ  ಅತ್ತೂರು ಕೊಡೆತ್ತೂರು ಗ್ರಾಮಸ್ಥರಿಂದ ತೂಟೆದಾರ ಸೇವೆ ಹಾಗೂ ಶ್ರೀ ಕೊಡಮಣಿತ್ತಾಯ ದೈವದ ನೇಮವು  ವಿಜೃಂಭಣೆಯಿಂದ ಜರುಗಿತು.ಬಳಿಕ ಧ್ವಜ ಅವರೋಹಣದೊಂದಿಗೆ ಜಾತ್ರೆಯು ಸಂಪನ್ನಗೊಂಡಿತು.  ಸಹಸ್ರಾರು ಮಂದಿ ರಥೋತ್ಸವ ಕಂಡು ಧನ್ಯರಾದರು.


ವರ್ಷಾವಧಿ ಜಾತ್ರೆಯ ಕೊನೆಯ ದಿನದಂದು ನಡೆಯುವ ತೂಟೆದಾರ  ಸೇವೆಯು ವಿಶೇಷ ಮಹತ್ವನ್ನು ಪಡೆದಿದೆ. ದೇವಸ್ಥಾನಕ್ಕೆ  ಸಂಬಂಧ ಪಟ್ಟ ಅತ್ತೂರು ಮತ್ತು ಕೊಡೆತ್ತೂ ಎಂಬ ಎರಡು ಮಾಗಣೆಗೆ ಸಂಬಂಧ ಪಟ್ಟ ಭಕ್ತರು ಎರಡು ಗುಂಪುಗಳಾಗಿ ನಿಂತು ಒಂದು ಗುಂಪಿನಿಂದ ಇನ್ನೊಂದು ಗುಂಪಿನತ್ತ  ತೂಟೆಯನ್ನು ಎಸೆಯುತ್ತಾರೆ.  ದೇವಸ್ಥಾನದ ಅನತಿ ದೂರದ ಜಲಕದ ಕಟ್ಟೆ ಸಮೀಪ  ನಂದಿನಿ ನದಿಯಲ್ಲಿ ದೇವರ ಜಳಕವಾದ ನಂತರ ಸಮೀಪದ ರಕೇಶ್ವರೀ ಸನ್ನಿಧಿ ಬಳಿ  ತೂಟೆದಾರ ನಡೆಯುತ್ತದೆ ಇಲ್ಲಿ ಮೂರು ಸುತ್ತು ನಡೆದ ನಂತರ ದೇವಸ್ಥಾನದ  ರಥಬೀದಿಗೆ ಬಂದು ಅಲ್ಲಿ ಮೂರು ಸುತ್ತು ತೂಟೆದಾರ ಸೇವೆ ನಡೆಯುತ್ತದೆ. ಎರಡು ಗುಂಪಿನ ನಡುವೆ ನಡೆಯುವ ತೂಟೆದಾರ ಸೇವೆಯಲ್ಲಿ  ಪಾಲ್ಗೊಳ್ಳು ಭಕ್ತರ ತಾಳ್ಮೆಯು ಅತಿರೇಖಕ್ಕೆ ಹೋಗದಂತೆ ಊರಿನ ಪ್ರಮುಖರು ತಡೆಯುತ್ತಾರೆ.ತೂಟೆದಾರ ಸೇವೆಯಲ್ಲಿ ಪಾಲ್ಗೊಂಡ ಭಕ್ತರಿಗೆ ಇದುವರೆಗೂ ಯಾವುದೇ  ತರದ ಗಾಯಗಳಾದ ಉದಾಹರಣೆ ಇಲ್ಲ.  ಒಂದು ವೇಳೆ ಗಾಯವಾದರೆ ಕಟೀಲು ದುರ್ಗೆಯ ಪ್ರಸಾದವೇ ಇದಕ್ಕೆ ಚೌಷದಿಯಾಗಿದೆ. ಈ ಸಂಪ್ರದಾಯ ಪ್ರತೀ ವರ್ಷ ನಡೆಯುವುದು ಇಲ್ಲಿನ ವಿಶೇಷ
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ