’
ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇಗುಲ ಪ್ರಥಮದರ್ಜೆ ಕಾಲೇಜಿನ ವಾರ್ಷಿಕ ಕ್ರೀಡಾಕೂಟವು ನೆರವೇರಿತು. ಭಾರತ್ ಬ್ಯಾಂಕ್ ಮುಂಬೈ ಇದರ ಮುಲ್ಕಿ ಶಾಖೆಯ ಮ್ಯಾನೇಜರ್ ಶ್ರೀಮತಿ ಶಕುಂತಲ ನಿರೇಂದ್ರ ಕ್ರೀಡಾಕೂಟವನ್ನು ಉದ್ಘಾಟಿಸಿದರು. ದೇವಳದ ಅನುವಂಶಿಕ ಅರ್ಚಕ ಕಮಲಾದೇವಿಪ್ರಸಾದ ಅಸ್ರಣ್ಣ ಕ್ರೀಡಾಕೂಟಕ್ಕೆ ಶುಭಹಾರೈಸಿದರು. ಪ್ರಾಂಶುಪಾಲ ಡಾ.ವಿಜಯ ವಿ., ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಅಶ್ವತ್ ಉಪಸ್ಥಿತರಿದ್ದರು. ವಾಣಿಜ್ಯ ಉಪನ್ಯಾಸಕರಾದ ಶ್ರೀಮತಿ ಪೂಜಾ ಕಾಂಚನ್ ಸ್ವಾಗತಿಸಿದರು, ಆದಿತ್ ಧನ್ಯವಾದ ಸಮರ್ಪಿಸಿದರು. ಪ್ರಿಯಾಂಕ ಕಾರ್ಯುಕ್ರಮ ನಿರ್ವಹಿಸಿದರು.