ಮಂಗಳೂರಿನ ಉದ್ಯಮಿ ಡಾ. ನಝೀರ್ ಅವರಿಗೆ ಪರಿಸರ ಕ್ಷೇತ್ರದ `ವಲ್ರ್ಡ್ ಬಿಸ್ನೆಸ್' ಪ್ರಶಸ್ತಿ
Tuesday, April 29, 2025
ಮಂಗಳೂರು : ಇಂದೋರ್ ನ ಗ್ಲೋಬಲ್ ಟ್ರಾಯಂಫ್ ಫೌಂಡೇಶನ್ ಆಯೋಜಿಸಿದ 2025ನೇ `ವಿಶ್ವ ಉದ್ಯಮ ಸಮಾವೇಶ'ದಲ್ಲಿ ಪರಿಸರ, ಸಮಾಜಸೇವೆ ಹಾಗೂ ಸಾಮಾಜಿಕ ಬದಲಾವಣೆ ಕ್ಷೇತ್ರದಲ್ಲಿ ವಿಶೇಷ ಸೇವೆಗೈದ ಪುತ್ತೂರು ಮೂಲದ ಮಂಗಳೂರು ಉದ್ಯಮಿ ಡಾ. ಸೈಯ್ಯದ್ ನಝೀರ್ ಅವರಿಗೆ `ವಲ್ರ್ಡ್ ಬಿಸ್ನೆಸ್ ಕನ್‍ಕ್ಲೇವ್' ಪ್ರಶಸ್ತಿ ಪ್ರಧಾನಿಸಲಾಯಿತು.
ಮಧ್ಯಪ್ರದೇಶದ ಇಂದೋರ್ ನ ಖಾಸಗಿ ಹೋಟೆಲ್ ಸಭಾಗೃಹದಲ್ಲಿ ನಡೆದ ಸಮಾರಂಭದಲ್ಲಿ ಇಂದೋರ್ ಕ್ರೈಂ ಬ್ರಾಂಚ್ ಎಡಿಸಿಪಿ ಡಾ. ರಾಜೇಶ್ ದಂಡೋತಿಯ, ಇಂದೋರ್ ಎಂಎಸ್‍ಎಂಇ ಡಿಎಎಫ್ ಸಹಾಯಕ ನಿರ್ದೇಶಕ ಗೌರವ ಗೋಯಲ್, ಕ್ಯಾಡಿಯಾ ಫಾರ್ಮಾಸ್ಯೂಟಿಕಲ್ಸ್‍ನ ಮಾಜಿ ಉಪಾಧ್ಯಕ್ಷ ಡಾ. ಪಿ.ಕೆ. ರಜಪೂತ್ ಅವರು ಡಾ. ನಝೀರ್ ಅವರು ಫೌಂಡೇಶನ್‍ನ ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸಿದರು.
ಸಮಾರಂಭದಲ್ಲಿ ಮಧ್ಯಪ್ರದೇಶದ ಉಪಮುಖ್ಯಮಂತ್ರಿಗಳಾದ ರಾಜೇಂದ್ರ ಶುಕ್ಲ, ಮತ್ತು ಜಗದೀಶ್ ದೇವುಡ, ಸಚಿವರಾದ ಏದಲ್ ಸಿಂಗ್ ಕನ್ಸನ, ಕೈಲಾಸ್ ವರ್ಗಿಯ, ಇಂದರ್ ಸಿಂಗ್ ಪಾರ್ಮರ್, ತುಳಸೀದಾಸ್ ಶಿಲಾವತ್ ಮತ್ತಿತರರು ಉಪಸ್ಥಿತರಿದ್ದರು.
ಮೂಲತಃ ಪುತ್ತೂರಿನ ಡಾ. ನಝೀರ್ ಅವರು ಈಗ ಮಂಗಳೂರಿನಲ್ಲಿ ವಾಣಿಜ್ಯೋದ್ಯಮಿಯಾಗಿದ್ದಾರೆ. ದೇಶಾದ್ಯಂತ ಪರಿಸರ ಮತ್ತು ಜಲಾಶಯಗಳ ತ್ಯಾಜ್ಯ ನಿರ್ವಹಣೆ, ನೀರು ಸಂರಕ್ಷಣಾ ಕ್ಷೇತ್ರ, ಬೋಟಿಂಗ್, ಮತ್ಸ್ಯ ಸಂರಕ್ಷಣೆಯಲ್ಲಿ ಸಕ್ರಿಯರಾಗಿರುವ ಇವರು ದೇಶ ವಿದೇಶದಲ್ಲಿ ಬೆಲೆಬಾಳುವ ಹರಳುಗಳ ವ್ಯಾಪಾರಿಯಾಗಿದ್ದಾರೆ. ವಿಶೇಷ ಸಾಧನೆಗಾಗಿ ಫಿಲ್ಮ್ ಆರ್ಗನೈಜೇಶನ್‍ನ ದಾದಾ ಸಾಹೇಬ್ ಫಾಲ್ಕೆ ಐಕಾನ್ ಅವಾರ್ಡ್, ಛತ್ರಪತಿ ಶಿವಾಜಿ ಮಹಾರಾಜ್ ಗೌರವ ಪ್ರಶಸ್ತಿ, 9ನೇ ಫಿಲೋಸಾಫಿಕಲ್ ಮುಂಬೈ ಪ್ರೆಸ್ ಮೀಡಿಯಾ ಅವಾರ್ಡ್, ಬಿಸ್ನೆಸ್ ಲೀಡರ್‍ಶಿಫ್ ಪ್ರಶಸ್ತಿ ಹೀಗೆ ಹಲವು ಪ್ರಶಸ್ತಿ, ಗೌರವಗಳಿಗೆ ಪಾತ್ರರಾಗಿದ್ದಾರೆ.