ತೋಕೂರು:ಉಚಿತ ಬೇಸಿಗೆ ಶಿಬಿರ- 2025 ಸಮಾರೋಪ ಸಮಾರಂಭ
Tuesday, April 29, 2025
ಹಳೆಯಂಗಡಿ:ಭಾರತ ಸರಕಾರ,ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ,ಮೈ ಭಾರತ್ ನೆಹರು ಯುವ ಕೇಂದ್ರ, ಮಂಗಳೂರು ಇವರುಗಳ ಮಾರ್ಗದರ್ಶನದಲ್ಲಿ
ಜಿಲ್ಲಾ,ರಾಜ್ಯ,ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ,ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ,ಮುಲ್ಕಿ ಸೀಮೆ ಅರಸು ಪ್ರಶಸ್ತಿ ಹಾಗೂ ಸೋಮಪ್ಪ ಸುವರ್ಣ ಸಂಸ್ಮರಣಾ ಸಮಾಜ ಸೇವಾ ಪ್ರಶಸ್ತಿ ಪುರಸ್ಕೃತ
ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್(ರಿ),ತೋಕೂರು, ಹಳೆಯಂಗಡಿ ಇದರ ಆಶ್ರಯದಲ್ಲಿ ಎ.20 ರಿಂದ ಎ.27 ರ ವರೆಗೆ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಉಚಿತ ಬೇಸಿಗೆ ಶಿಬಿರ 2025 ರ ಸಮಾರೋಪ ಸಮಾರಂಭವು ನಡೆಯಿತು.
ಮೂಡಬಿದರೆ ಕಡಲಕೆರೆ ಪ್ರೇರಣಾ ಶಾಲೆಯ ಶಿಕ್ಷಕಿ ಶ್ರೀಮತಿ ಹರ್ಷಿತಾ ಚಂದ್ರಶೇಖರ್ ಅವರು ಶಿಬಿರದ ಎಳೂ ದಿನಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಮತ್ತು ಸ್ಮರಣಿಕೆ ವಿತರಿಸಿದರು.ಬಳಿಕ ಮಾತನಾಡಿದ ಅವರು ಶಿಬಿರದಲ್ಲಿ ಮಕ್ಕಳು ಕಲಿಯುವ ಕೌಶಲ್ಯಗಳು, ಅವರನ್ನು ನಾಳೆಯ ಯಶಸ್ವಿ ನಾಗರಿಕರನ್ನಾಗಿಸಲು ಸಹಾಯ ಮಾಡುತ್ತವೆ.ಸಮಯ ಪರಿಪಾಲನೆ, ತಂಡದೊಂದಿಗೆ ಕೆಲಸ, ಸೃಜನಾತ್ಮಕತೆ ಮತ್ತು ಆತ್ಮವಿಶ್ವಾಸ ಇವೆಲ್ಲಾ ಶಿಬಿರದ ಮೂಲಕ ಮಕ್ಕಳು ಮೈಗೂಡಿಸಿ ಕೊಳ್ಳ ಬಹುದು.ಶಿಕ್ಷಕರು ಮಕ್ಕಳಿಗೆ ಪಾಠ ಮಾತ್ರ ಕಲಿಸುವುದಲ್ಲ,ಜೊತೆಗೆ ಯಾವ ರೀತಿ ಒಳ್ಳೆಯ ವ್ಯಕ್ತಿಯಾಗಿ ಬೆಳೆಯಬೇಕು ಎಂಬುದನ್ನೂ ತೋರಿಸುತ್ತಾರೆ ಎಂದರು.
ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಸಂಪತ್ ಜೆ. ಶೆಟ್ಟಿ,ತೋಕೂರು ಗುತ್ತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಮಕ್ಕಳಲ್ಲಿ ಸಾಂಘಿಕ ಜೀವನದ ಅರಿವು ಮೂಡಿಸಲು ಇಂತಹ ಶಿಬಿರಗಳು ಮುಖ್ಯ.ಮಕ್ಕಳ ಅಭಿರುಚಿಗೆ ಅನುಗುಣವಾಗಿ ಹೊಸ ವಿಷಯಗಳನ್ನು ಕಲಿಸಿ ಕೊಟ್ಟಾಗ ಮಕ್ಕಳ ಪ್ರತಿಭೆಯ ಅನಾವರಣವಾಗುತ್ತದೆ. ಮುಂದಿನ ದಿನಗಳಲ್ಲಿ ಸಂಸ್ಥೆಯು ಇನ್ನಷ್ಟು ಉನ್ನತ ಮಟ್ಟದ ಶಿಬಿರಗಳನ್ನು ನಡೆಸುವಂತಾಗಲಿ ಎಂದರು.
ತೋಕೂರು ಹಳೆಯಂಗಡಿ ಮಹಿಳಾ ಮಂಡಲದ ಪ್ರಧಾನ ಕಾರ್ಯದರ್ಶಿ ಶ್ರೀಮತಿ ವನಿತಾ ಕೆ. ಸನಿಲ್ ಸಂಸ್ಥೆಯ ಕಾರ್ಯ ಚಟುವಟಿಕೆಗಳನ್ನು ಶ್ಲಾಘಿಸಿ ಶುಭ ಹಾರೈಸಿದರು.
ಶಿಬಿರದಲ್ಲಿ ಪಾಲ್ಗೊಂಡ ಪುಟಾಣಿ ಮಕ್ಕಳು ತಮ್ಮ ತಮ್ಮ ಅನಿಸಿಕೆಗಳನ್ನು ಹಾಗೂ ಶಿಬಿರದ ಅನುಭವಗಳನ್ನು ನೆರೆದವರೊಂದಿಗೆ ಹಂಚಿ ಕೊಂಡರು.
ಪೋಷಕರು ಶಿಬಿರದ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿ, ಕಲಿಕೆ-ನಲಿಕೆಯೊಂದಿಗೆ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ದಿನನಿತ್ಯ ಶುಚಿ-ರುಚಿಯಾದ ಆಹಾರವನ್ನು ನೀಡಿರುವುದಕ್ಕೆ ಮತ್ತು ಶಿಬಿರವನ್ನು ಆಯೋಜಿಸಿದ ಸಂಸ್ಥೆಯ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು.
ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ಯಶೋದಾ ದೇವಾಡಿಗ ಏಳು ದಿನಗಳ ಕಾಲ ನಡೆದ ಶಿಬಿರದ ಕಿರು ವರದಿ ವಾಚಿಸಿದರು.
ಶಿಬಿರದ ಮಕ್ಕಳಿಗೆ ಬೇರೆ ಬೇರೆ ವಿಷಯಗಳನ್ನು ಕಲಿಸಿ ಶಿಬಿರದ ಯಶಸ್ಸಿಗೆ ಮುಖ್ಯ ಕಾರಣಿಕರ್ತರಾದ ಸಂಪನ್ಮೂಲ ವ್ಯಕ್ತಿಗಳಿಗೆ ಶಾಲು ಹೊದೆಸಿ, ಸ್ಮರಣಿಕೆ ಹಾಗೂ ಗುರು ಕಾಣಿಕೆ ನೀಡಿ ಗುರುವಂದನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸ್ಪೋರ್ಟ್ಸ್ ಕ್ಲಬ್ ನ ಗೌರವಾಧ್ಯಕ್ಷ ಪ್ರಶಾಂತ್ ಕುಮಾರ್ ಬೇಕಲ್,ಅಧ್ಯಕ್ಷ ದೀಪಕ್ ಸುವರ್ಣ,ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ಯಶೋದಾ ದೇವಾಡಿಗ,
ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ತೋಕೂರು ಇದರ ವ್ಯವಸ್ಥಾಪನಾ ಸಮಿತಿ ಸದಸ್ಯೆ ಶ್ರೀಮತಿ ಶೋಭಾ ವಿ. ಅಂಚನ್,ಪಡುಪಣಂಬೂರು ಗ್ರಾಮ ಪಂಚಾಯತ್ ಸದಸ್ಯ ಸಂತೋಷ್ ಕುಮಾರ್,ಮಾಧ್ಯಮ ಪ್ರತಿನಿಧಿ ಪ್ರಮೋದ್ ಕುಮಾರ್ ಆಚಾರ್ಯ,ಚಿತ್ರಕಲಾ ಶಿಕ್ಷಕ ಸುಹಾಸ್ ನಾನಿಲ್, ವಕೀಲ ರವೀಶ್ ಕಾಮತ್,ಭಜನಾ ಶಿಕ್ಷಕ ಸುರೇಶ್ ಆಚಾರ್ಯ,ತುಳು ಲಿಪಿ ಕಲ್ಪಾದಿ ಶ್ರೀಮತಿ ನಿಶ್ಮಿತಾ, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪದ್ಮನಾಭ ಶೆಟ್ಟಿ,ಜೊತೆ ಕಾರ್ಯದರ್ಶಿ ಚಂದ್ರ ಸುವರ್ಣ,ಪದಾಧಿಕಾರಿಗಳು, ಸದಸ್ಯರುಗಳು , ಸದಸ್ಯೆಯರು, ಶಿಬಿರಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.
ಶಿಬಿರಾರ್ಥಿ ಕುಮಾರಿ ನಿಯತಿ ಎಂ.ಅಂಚನ್ ಪ್ರಾರ್ಥಿಸಿದರು. ಅದ್ಯಕ್ಷ ದೀಪಕ್ ಸುವರ್ಣ ಸ್ವಾಗತಿಸಿದರು.ಜೊತೆ ಸಾಂಸ್ಕತಿಕ ಕಾರ್ಯದರ್ಶಿ ಶ್ರೀಮತಿ ನೀಮಾ ಸನಿಲ್ ವಂದಿಸಿದರು. ಕಾರ್ಯಾಧ್ಯಕ್ಷ ಸಂತೋಷ್ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.
ರಾಷ್ಟ್ರ ಗೀತೆಯೊಂದಿಗೆ ಕಾರ್ಯಕ್ರಮವು ಮುಕ್ತಾಯ ಗೊಂಡಿತು.