ಕಟೀಲು ದೇಗುಲದಲ್ಲಿ ಪಾನಕ ಮಂಟಪ ಉದ್ಘಾಟನೆ
Thursday, April 17, 2025
ಕಟೀಲು : ಮಾತಾಜಿ ಪಿತಾಜಿ ಗುರೂಜಿ ಎಂಬ ಥ್ರೀಜಿಯನ್ನ ಮರೆಯುವ ಈ ಕಾಲದಲ್ಲಿ ಸಂಸ್ಕಾರ ಕಲಿಸುವ ಕಾರ್ಯ ಅಗತ್ಯವಾಗಿದೆ ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವಾಮಯ್ಯ ಶೆಟ್ಟಿ ಹಾಗೂ ಸಚಿನ್ ಶೆಟ್ಟಿಯವರು ನಿರ್ಮಿಸಿ ದೇವರಿಗೆ ಸಮರ್ಪಿಸಿದ ಆಕರ್ಷಕ ಪಾನಕ ಮಂಟಪವನ್ನು ಉದ್ಘಾಟಿಸಿ ಮಾತನಾಡಿದರು.
ಪಾನಕ ಮಂಟಪದ ಮೂಲಕ ಸವಿಯನ್ನು ಒಳಿತನ್ನು ಹಂಚುವ ಕಾರ್ಯ ಆಗಲಿ. ಸಹಸ್ರಾರು ಮಂದಿ ಭೇಟಿ ನೀಡುವ ಕಟೀಲಿನಲ್ಲಿ ಸ್ವಚ್ಛತೆಗೆ ಹೆಚ್ಚು ಮಹತ್ವ ನೀಡಲಾಗಿದೆ. ಯಕ್ಷಗಾನದ ಮೂಲಕ ಕಟೀಲು ಮಹತ್ವದ ಕಲಾಸೇವೆ ಮಾಡುತ್ತಿದೆ ಎಂದು ಸ್ವಾಮೀಜಿ ಹೇಳಿದರು.
ಮಾಜಿ ಸಚಿವ ಅಭಯಚಂದ್ರ ಜೈನ್. ಶಿಬರೂರು ಗುತ್ತಿನಾರ್ ಉಮೇಶ್ ಶೆಟ್ಟಿ. ಕಟೀಲು ದೇಗುಲದ ಮೊಕ್ತೇಸರರಾದ ವಾಸುದೇವ ಆಸ್ರಣ್ಣ. ಕೊಡೆತ್ತೂರುಗುತ್ತು ಸನತ್ ಕುಮಾರ ಶೆಟ್ಟಿ. ಶಂಕರ್ ಇಲೆಕ್ಟ್ರಿಕಲ್ಸ್ ನ ರಾಜೇಶ್ ಶೆಟ್ಟಿ, ವೇದವ್ಯಾಸ ತಂತ್ರಿ. ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತ ಆಸ್ರಣ್ಣ, ಪ್ರಸಾದ ಆಸ್ರಣ್ಣ. ಯಕ್ಷಗಾನ ಮೇಳಗಳ ಸಂಚಾಲಕ ಕಲ್ಲಾಡಿ ದೇವೀಪ್ರಸಾದ ಶೆಟ್ಟಿ. ಕಿಶೋರ್ ಶೆಟ್ಟಿ ಕೊಡೆತ್ತೂರಗುತ್ತು ಮತ್ತಿತರರಿದ್ದರು. ಶ್ರೀಹರಿನಾರಾಯಣದಾಸ ಆಸ್ರಣ್ಣ ಸ್ವಾಗತಿಸಿದರು. ನಿತೇಶ್ ಶೆಟ್ಟಿ ನಿರೂಪಿಸಿದರು.