-->

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಕಿನ್ನಿಗೋಳಿ ಘಟಕದ ಉದ್ಘಾಟನೆ

ಕಟೀಲು ವರ್ಷಾವಧಿ ಜಾತ್ರೆ

ಕಟೀಲು ವರ್ಷಾವಧಿ ಜಾತ್ರೆ
ಎ.13 ರಿಂದ ಎ.20 ರವರೆಗೆ ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆ
ಎಕ್ಕಾರು:ಡಾ.ಬಿ.ಅರ್ ಅಂಬೇಡ್ಕರ್ ಅವರ 134 ನೇ ಜನ್ಮದಿನ ಕಾರ್ಯಕ್ರಮ

ಎಕ್ಕಾರು:ಡಾ.ಬಿ.ಅರ್ ಅಂಬೇಡ್ಕರ್ ಅವರ 134 ನೇ ಜನ್ಮದಿನ ಕಾರ್ಯಕ್ರಮ

ಬಜಪೆ:ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ ) ಸ್ವಾಭಿಮಾನಿ ಪ್ರೊ. ಬಿ. ಕೃಷ್ಣಪ್ಪ ಬಣ -ಗ್ರಾಮ ಶಾಖೆ ಎಕ್ಕಾರು ಇದರ ವತಿಯಿಂದ ಮಹಾ ಮಾನವತಾವಾದಿ, ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಿ. ಆರ್. ಅಂಬೇಡ್ಕರ್ ರವರ 134 ನೇ ಜನ್ಮ ದಿನಾಚರಣಾ ಕಾರ್ಯಕ್ರಮವು ಎ.  14  ರಂದು ಎಕ್ಕಾರು ಗ್ರಾಮ ಪಂಚಾಯತ್ ಮೈದಾನದಲ್ಲಿ ನಡೆಯಿತು. ಪ್ರಗತಿಪರ ಚಿಂತಕ ಹಾಗೂ ವಕೀಲರಾದ  ದಿನೇಶ್ ಹೆಗ್ಡೆ ಉಳೆಪಾಡಿಯವರು ಬಾಬಾ ಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉಧ್ಘಾಟಿಸಿದರು.ಬಳಿಕ  ಮಾತನಾಡಿದ ಅವರು ಅಂಬೇಡ್ಕರ್ ರವರು ವಿಶ್ವ ಕಂಡ ಬೆರಳೆಣಿಕೆಯ ನಾಯಕರಲ್ಲಿ ಪ್ರಮುಖರು. ತನ್ನ ಅಪಾರ ಜ್ಞಾನ, ವಿಧ್ವತ್ ನಿಂದಾಗಿ ಅವರು ವಿಶ್ವಜ್ಞಾನಿಯಾಗಿದ್ದಾರೆ.  ನಮ್ಮ ದೇಶದಲ್ಲಿ ಹುಟ್ಟಿ ಬೆಳೆದು ಇಡೀ ವಿಶ್ವಕ್ಕೇ ನಮ್ಮ ದೇಶದ ಕೀರ್ತಿ ಪಾತಾಕೆಯನ್ನು ಹಾರಿಸಿದವರು. ಶಿಕ್ಷಣಕ್ಕೆ ಬಡತನವೆಂಬುವುದು ಅಡ್ಡಿಯಾಗಲಾರದು. ತನ್ನಲ್ಲಿ ಸಾಧಿಸುವ ಛಲ ಇದ್ದರೆ ಯಾವುದೂ ಅಸಾಧ್ಯವಲ್ಲ ಎಂಬುವುದನ್ನು ಜಗತ್ತಿಗೆ ತೋರಿಸಿಕೊಟ್ಟವರು. ತಾನು ಶೋಷಿತ ಸಮುದಾಯದಲ್ಲಿ ಹುಟ್ಟಿ, ಬಾಲ್ಯದಿಂದಲೇ ಮನುವಾದಿ ವ್ಯವಸ್ಥೆಯ ಶೋಷಣೆಯ ಕರಾಳತೆಯನ್ನು ಸ್ವತಃ ಅನುಭವಿಸಿದರೂ, ಸಂವಿಧಾನದಲ್ಲಿ ಎಲ್ಲಾ ಜಾತಿ, ಧರ್ಮಗಳಿಗೂ ಸಮಾನತೆಯನ್ನು ಕಲ್ಪಿಸಿಕೊಟ್ಟವರು. ಭಾರತದಲ್ಲಿ ಜಾತಿ ವ್ಯವಸ್ಥೆ ಸಂಪೂರ್ಣವಾಗಿ ನಾಶ ಆಗಿಲ್ಲ, ಬದಲಾಗಿ ಅದು ಜೀವಂತವಾಗಿದೆ.ಆದರೆ ಅದರ ಸ್ವರೂಪ ಮಾತ್ರ ಬದಲಾಗಿದೆ ಎಂದರು.   

 ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಮಿಥುನ್ ರೈ  ಮಾತನಾಡಿ ಎಲ್ಲಾ ಸಮುದಾಯಗಳನ್ನು ಒಟ್ಟು ಸೇರಿಸಿ ಅಂಬೇಡ್ಕರ್ ರವರ ಜನ್ಮ ದಿನಾಚರಣೆಯನ್ನು ಅದ್ದೂರಿಯಾಗಿ ನಡೆಸುತ್ತಿರುವುದು ಒಳ್ಳೆಯ ಬೆಳವಣಿಗೆ. ಇದರಿಂದಾಗಿ ಸಮಾಜದಲ್ಲಿರುವ ಜಾತಿ, ಧರ್ಮಗಳ ನಡುವಿನ ಅಂತರ ಕಡಿಮೆಯಾಗಿ ಸಹಬಾಳ್ವೆ ಬೆಳೆಯಲು ಸಾಧ್ಯ. ಶೋಷಿತ ಸಮುದಾಯಗಳು ಉತ್ತಮ ಶಿಕ್ಷಣ ಪಡೆದು ಐ.ಎ.ಎಸ್, ಐ.ಪಿ.ಎಸ್. ಹುದ್ದೆಯನ್ನು ಅಲಂಕರಿಸಿ ಮುಂದಿನ ದಿನಗಳಲ್ಲಿ ಅವರೇ ಇಂತಹ ಕಾರ್ಯಕ್ರಮಗಳನ್ನು ಅವರೇ ಉಧ್ಘಾಟಿಸುವ ಹಂತಕ್ಕೆ ತಲುಪಿದಾಗ ಮಾತ್ರ ಅಂಬೇಡ್ಕರ್ ರವರ ಕನಸು ನನಸಾಗಳು ಸಾಧ್ಯ ಎಂದರು. 

ದ.ಸಂ.ಸ. ಜಿಲ್ಲಾ ಸಂಚಾಲಕ  ಸದಾಶಿವ ಪಡುಬಿದ್ರಿ ಮಾತನಾಡಿ ಅಂಬೇಡ್ಕರ್ ರವರು ಇಡೀ ಜಗತ್ತಿಗೆ ಸಮಾನತೆಯ ಸಂದೇಶವನ್ನು ಹೇಳಿ ಕೊಟ್ಟವರು. ಅವರ ವಿಚಾರಧಾರೆಗಳು ಇಂದಿಗೂ ಹಾಗೂ ಮುಂದೆಯೂ ಪ್ರಸ್ತುತ. ಭಾರತವೆಂಬ ಮನುವಾದಿ ಜಾತಿ ವ್ಯವಸ್ಥೆಯ ಮಣ್ಣಿನಲ್ಲಿ ಅಂಬೇಡ್ಕರ್ ಹುಟ್ಟದೇ ಇರುತ್ತಿದ್ದರೆ ಇಂದಿಗೂ ದಲಿತರ ಪರಿಸ್ಥಿತಿ ಹೀನಾಯವಾಗಿರುತ್ತಿತ್ತು. ನಾವೆಲ್ಲಾ ಅಂಬೇಡ್ಕರ್ ರವರ ವಿಚಾರಧಾರೆಗಳನ್ನು ಅರಿತು ಜಾಗೃತರಾಗಿ, ಸಂಘಟಿತರಾಗಿ ಸಮತಾ ಸಮಾಜವನ್ನು ಕಟ್ಟಬೇಕಾಗಿದೆ ಎಂದರು. 

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಸಂಚಾಲಕ  ಗಣೇಶ್ ಕೆಂಚಗುಡ್ಡೆ ವಹಿಸಿದ್ದರು. 

ಕಾರ್ಯಕ್ರಮದಲ್ಲಿ  ಮಾಜಿ ಸಚಿವ  ಕೆ. ಅಭಯಚಂದ್ರ ಜೈನ್, ದ.ಸಂ.ಸ. ಜಿಲ್ಲಾ ಸಂಚಾಲಕ  ಸದಾಶಿವ ಪಡುಬಿದ್ರಿ, ಮಂಗಳೂರು ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ   ಸಹಕಾರ ರತ್ನ ಮೋನಪ್ಪ ಶೆಟ್ಟಿ ಎಕ್ಕಾರು, ಎಕ್ಕಾರು ಶ್ರೀ ಕೊಡಮಣಿತ್ತಾಯ ದೈವಸ್ಥಾನದ  ಆಡಳಿತ ಮೊಕ್ತೇಸರ  ನಿತಿನ್ ಹೆಗ್ಡೆ ಕಾವರ ಮನೆ (ತಿಮ್ಮ ಕಾವರು) ಉದ್ಯಮಿ,ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ  ರೊನಾಲ್ಡ್ ಫೆರ್ನಾಂಡಿಸ್  ಪೆರ್ಮುದೆ,ಬಜ್ಪೆ ಪರಿವರ್ತನಾ ಕೋ -ಆಪರೇಟಿವ್ ಸೊಸೈಟಿಯ  ಅಧ್ಯಕ್ಷ  ಕೃಷ್ಣಾನಂದ.ಡಿ, ಪಿ. ಡಬ್ಲ್ಯೂಡಿ. ಗುತ್ತಿಗೆದಾರ ವಿ.ಕಣ್ಣನ್, ದ.ಸಂ.ಸ. ತಾಲೂಕು ಸಂಚಾಲಕ  ರಾಘವೇಂದ್ರ.ಎಸ್. ಪೇಜಾವರ, ಲಯನ್ಸ್ ಕ್ಲಬ್ ಕಟೀಲು-ಎಕ್ಕಾರು  ಅಧ್ಯಕ್ಷ  ಶೇಖರ್ ಶೆಟ್ಟಿ ಎಕ್ಕಾರು, ದ.ಸಂ.ಸ. ಎಕ್ಕಾರು ಗ್ರಾಮ ಶಾಖೆಯ ಮಹಿಳಾ ಸಂಚಾಲಕಿ ಶ್ರೀಮತಿ ಸೌಮ್ಯ ಸುರೇಶ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

   ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಾದ   ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ  ಉದ್ಯಮಿ ರೋನಾಲ್ಡ್ ಫೆರ್ನಾಂಡಿಸ್ ಪೆರ್ಮುದೆ(ಕೃಷಿ ಕ್ಷೇತ್ರದಲ್ಲಿ 2024 ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ), ದೈವ ನರ್ತಕ ಹರಿಯಪ್ಪ ಬಂಗೇರ ಶಿಬರೂರು(ಧಾರ್ಮಿಕ ಕ್ಷೇತ್ರ)ರಘು. ಕೆ. ಎಕ್ಕಾರು(ಸಾಮಾಜಿಕ ಕ್ಷೇತ್ರ)  ನಾಗಪ್ಪ ಶೇರಿಗಾರ ಕೆಂಚಗುಡ್ಡೆ ಎಕ್ಕಾರು(ಕಲಾ ಕ್ಷೇತ್ರ)ಮಂಗಳೂರು ವಿಶ್ವ ವಿದ್ಯಾಲಯದ ಅಂತಿಮ ವರ್ಷದ ಪರೀಕ್ಷೆಯಲ್ಲಿ ಪ್ರಥಮ ರ‍್ಯಾಂಕ್ ಗಳಿಸಿ ಗೋಲ್ಡ್ ಮೆಡಲ್ ಪಡೆದಿರುವ ಕುಮಾರಿ ಶ್ರೇಯಾ.ಜಿ. ಎಸ್ (ಶೈಕ್ಷಣಿಕ ಕ್ಷೇತ್ರ) ಮೊದಲಾದವರನ್ನು ಗೌರವಿಸಲಾಯಿತು. 


ವಾಸು ಎಕ್ಕಾರು ಸ್ವಾಗತಿಸಿದರು. ಕೃಷ್ಣ.ಕೆ. ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು.  ರಘು.ಕೆ. ಎಕ್ಕಾರು ಧನ್ಯವಾದವಿತ್ತರು.

ಕಾರ್ಯಕ್ರಮದಲ್ಲಿ  ಸ್ಥಳೀಯ ಅಂಗನವಾಡಿಯ ಪುಟಾಣಿ  ಮಕ್ಕಳು ಹಾಗೂ ಸ್ಥಳೀಯ ಪ್ರತಿಭೆಗಳಿಂದ  ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಕಾಪು ರಂಗತರಂಗ ಕಲಾವಿದರಿಂದ "ಕುಟ್ಯಣ್ಣನ ಕುಟುಂಬ " ನಾಟಕ  ಪ್ರದರ್ಶನ ಗೊಂಡಿತು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ