ಕಟೀಲಿನಲ್ಲಿ ನೂತನ ಬ್ರಹ್ಮರಥಕ್ಕೆ ಚಾಲನೆ, ರಕ್ತೇಶ್ವರೀ ಸಾನ್ನಿಧ್ಯ ಜೀರ್ಣೋದ್ದಾರಕ್ಕೆ ಮುಹೂರ್ತ
Thursday, April 17, 2025
ಕಟೀಲು: ಎಲ್ಲರ ಮನೆಗಳಲ್ಲೂ ಇವತ್ತು ವಾಹನಗಳಿವೆ. ಒಂದಲ್ಲ ಎರಡೆರೆಡು ವಾಹನಗಳಿವೆ. ಅದರೆ ದೇವರ ವಾಹನವಾದ ರಥವನ್ನು ಒಬ್ಬನಿಂದ ಸಾಧ್ಯವಿಲ್ಲ. ಭಕ್ತರೆಲ್ಲರೂ ಸೇರಿ ಎಳೆಯಬೇಕು. ಮತ್ತು ರಥದಲ್ಲಿ ದೇವರು ಮಾತ್ರ ಕುಳಿತುಕೊಳ್ಳಬಹುದು. ಇಂತಹ ವಿಶಿಷ್ಟವಾದ ಬ್ರಹ್ಮರಥವನ್ನು ಕಟೀಲು ದೇಗುಲದಲ್ಲಿ ನಿರ್ಮಿಸಲು ಉದ್ದೇಶಿಸಿರುವುದು ಅಭಿನಂದನಾರ್ಹ ಎಂದು ಪಲಿಮಾರು ಮಠದ ಶ್ರೀ ವಿದ್ಯಾಧೀಶ ಸ್ವಾಮೀಜಿ ಹೇಳಿದರು.
ಅವರು ಕಟೀಲು ಶ್ರೀದುರ್ಗಾಪರಮೇಶ್ವರೀ ದೇಗುಲದಲ್ಲಿ ನೂತನ ಬ್ರಹ್ಮರಥಕ್ಕೆ ಮುಹೂರ್ತ ನೆರವೇರಿಸಿ, ರಕ್ತೇಶ್ವರೀ ಸಾನ್ನಿಧ್ಯದ ಜೀರ್ಣೋದ್ಧಾರಕ್ಕೆ ಚಾಲನೆ ನೀಡಿದರು.
ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ, ಪಲಿಮಾರು ಮಠದ ಕಿರಿಯ ಯತಿ ಶ್ರೀ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ,
ಕಟೀಲು ದೇಗುಲದ ಆನುವಂಶಿಕ ಮೊಕ್ತೇಸ್ವರ ವಾಸುದೇವ ಆಸ್ರಣ್ಣ
ಶಿಬರೂರು ಕೃಷ್ಣರಾಜ ತಂತ್ರಿ, ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತ ಆಸ್ರಣ್ಣ, ಪ್ರಸಾದ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ. ದೇಗುಲದ ಆಡಳಿತ ಸಮಿತಿ ಅಧ್ಯಕ್ಷ
ಸನತ್ ಕುಮಾರ ಶೆಟ್ಟಿ ಕೊಡೆತ್ತೂರುಗುತ್ತು, ಕಿಶೋರ್ ಶೆಟ್ಟಿ ಕೊಡೆತ್ತೂರುಗುತ್ತು. ಮಾಜಿ ಸಂಸದ
ನಳಿನ್ ಕುಮಾರ ಕಟೀಲ್, ಶಾಸಕರಾದ
ಉಮಾನಾಥ ಕೋಟ್ಯಾನ್
ಮುಂಬೈ ಉದ್ಯಮಿ, ಸಾನಿ ವಾಮಯ್ಯ ಶೆಟ್ಟಿ,
ಶಂಕರ್ ಎಲೆಕ್ಟ್ರಿಕಲ್ಸ್ ರಾಜೇಶ್ ಶೆಟ್ಟಿ
ಶಿಬರೂರು ಪ್ರದ್ಯುಮ್ನ ರಾವ್.
ಬಿಪಿನ್ ಚಂದ್ರ ಶೆಟ್ಟಿ, ಪ್ರವೀಣ್ ಭಂಡಾರಿ,ಸಿ.ಎ.ಸುದೇಶ್ ರೈ ಮತ್ತಿತರರಿದ್ದರು. ವಾಸ್ತುತಜ್ಞ
ಗುಂಡಿಬೈಲು ಸುಬ್ರಹ್ಮಣ್ಯ ಭಟ್ ಬ್ರಹ್ಮರಥ ರಕ್ತೇಶ್ವರೀ ಸಾನ್ನಿಧ್ಯದ ಜೀರ್ಣೋದ್ಧಾರದ ಮಾಹಿತಿ ನೀಡಿದರು. ಕ್ಯಾಪ್ಸ್ ಫೌಂಡೇಷನ್ನ ಸಿಎ ಚಂದ್ರಶೇಖರ ಶೆಟ್ಟಿ ಇವರ ವತಿಯಿಂದ ಕಟೀಲು ಉತ್ಸವದ ಸಂದರ್ಭ ಸೇವೆ ಸಲ್ಲಿಸುವ ಒಂದು ಸಾವಿರಕ್ಕೂ ಮಿಕ್ಕಿದ ಸ್ವಯಂಸೇವಕರಿಗೆ ನೀಡುವ ಟೀಶರ್ಟ್ ಬಟ್ಟೆಚೀಲಗಳನ್ನು ಸಾಂಕೇತಿಕವಾಗಿ ನೀಡಲಾಯಿತು.
ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಸ್ವಾಗತಿಸಿದರು. ನಿತೇಶ್ ಶೆಟ್ಟಿ ಎಕ್ಕಾರು ನಿರೂಪಿಸಿದರು.