ಎ.10 ಹಾಗೂ ಎ.11:ಕತ್ತಲ್ ಸಾರ್ ನ ಶ್ರೀವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ದಾರ,ಶ್ರೀದೇವರಿಗೆ ಸಾನಿಧ್ಯ ಕಲಶ ಹಾಗೂ ವರ್ಷಾವಧಿ ಉತ್ಸವ
Wednesday, April 9, 2025
ಬಜಪೆ: ಸಮೀಪದ ಕತ್ತಲ್ ಸಾರ್ ನ ಶ್ರೀವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ದಾರದ ಪ್ರಯುಕ್ತ ಶ್ರೀದೇವರಿಗೆ ಸಾನಿಧ್ಯ ಕಲಶ ಹಾಗೂ ವರ್ಷಾವಧಿ ಉತ್ಸವವು ಎ.10 ರ ಗುರುವಾರ ಹಾಗೂ ಎ.11 ರ ಶುಕ್ರವಾರದಂದು ನಡೆಯಲಿದೆ.ಎ.11 ರ ಶುಕ್ರವಾರ ರಾತ್ರಿ ಶ್ರೀ ವಿಷ್ಣುಮೂರ್ತಿ ದೇವರ ಉತ್ಸವ,ಕಟ್ಟಲ್ತಾಯ ಪಂಜುರ್ಲಿ ದೈವಗಳ ನೇಮವು ಜರುಗಲಿರುವುದು.ಎ.9 ರ ಬುಧವಾರ ಸಂಜೆ ಶುದ್ದ ಪುಣ್ಯಾಹ ಸಹಿತ ವಾಸ್ತುಪೂಜೆ,ವಾಸ್ತು ಬಲಿ,ದಿಗ್ ದೇವತಾ ಬಲಿ ,ರಾಕ್ಷೊಘ್ನ ಹೋಮ,ಎ.10 ರ ಗುರುವಾರ ಬೆಳಿಗ್ಗೆ ಶುದ್ದ ಪುಣ್ಯಾಹ,ಶಾಂತಿ ಪ್ರಾಯಶ್ಚಿತ ಹೋಮ,ಗಣಪತಿ ದೇವರಿಗೆ ನವಕ,ವಿಷ್ಣುಮೂರ್ತಿ ದೇವರಿಗೆ ಪಂಚ ವಿಂಶತಿ ಕಲಸ,ಕಟ್ಟಲ್ತಾಯ ದೈವಕ್ಕೆ ನವಕಲಶ ಹಾಗೂ ಪ್ರಧಾನ ಹೋಮ,ಮಹಾಪೂಜೆ,ಮಂತ್ರಾಕ್ಷತೆ ,ಪ್ರಸಾದ ವಿತರಣೆ,ಎ.11 ರ ಶುಕ್ರವಾರ ಬೆಳಿಗ್ಗೆ 8ರಿಂದ ದೇವರಿಗೆ ಕಲಶ ಪ್ರಧಾನ ಹೋಮ,ಪಂಚಾಮೃತ ಕಲಶಾಭಿಷೇಕ,ಮಧ್ಯಾಹ್ನ 12:30ರಿಂದ ಮಹಾಪೂಜೆ,ಆರಾಧನೆ,ಸಾರ್ವಜನಿಕ ಅನ್ನ ಸಂತರ್ಪಣೆ,ಸಂಜೆ 7 ರಿಂದ ಶ್ರೀ ಗಣಪತಿ ದೇವರಿಗೆ ಪಂಚಕಜ್ಜಾಯ ಪೂಜೆ,ಶ್ರೀವಿಷ್ಣುಮೂರ್ತಿ ದೇವರಿಗೆ ಕಾರ್ತಿಪೂಜೆ,ಹೂವಿನ ಪೂಜೆ,ರಂಗಪೂಜೆ,ರಾತ್ರಿ 9 ರಿಂದ ಬಲಿ ಹೊರಟು ಉತ್ಸವ,ರಾತ್ರಿ 11 ರಿಂದ ವಸಂತ ಮಂಟಪದಲ್ಲಿ ಕಟ್ಟೆಪೂಜೆಗಳು,ಕಟ್ಟಲ್ತಾಯ ಪಂಜುರ್ಲಿ ದೈವಗಳ ಗಗ್ಗರ ಸೇವೆ,ಶ್ರೀದೇವರ ಮತ್ತು ದೈವಗಳ ಭೇಟಿ ಹಾಗೂ ಪ್ರಸಾದ ವಿತರಣೆಯು ನಡೆಯಲಿದೆ.