
ಪಾವಂಜೆಯಲ್ಲಿಂದು ಉದಯಾಸ್ತಮಾನ ಗಮಕ
Sunday, March 2, 2025
ಹಳೆಯಂಗಡಿ : ಪಾವಂಜೆ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ತಾ. ೨ರ ಭಾನುವಾರ ದಿನವಿಡೀ ಗಮಕ ಕಾರ್ಯಕ್ರಮ ನಡೆಯಲಿದ್ದು, ಕರ್ನಾಟಕ ಗಮಕ ಕಲಾ ಪರಿಷತ್ತು ಮಂಗಳೂರು ಘಟಕವು ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ಪಾವಂಜೆ ದೇಗುಲದ ಸಹಯೋಗದಲ್ಲಿ ಉದಯಾಸ್ತಮಾನ ಗಮಕ ಕಾರ್ಯಕ್ರಮವನ್ನು ಆಯೋಜಿಸಿದೆ. ಬೆಳಿಗ್ಗೆ ಹರಿಕೃಷ್ಣ ಪುನರೂರು, ಪ್ರದೀಪ ಕಲ್ಕೂರ, ಡಾ. ಎಂ.ಪಿ.ಶ್ರೀನಾಥ್, ವಿ.ಸೂರ್ಯಕುಮಾರ, ಮಧೂರು ಮೋಹನ ಕಲ್ಲೂರಾಯ, ಪಾವಂಜೆ ಕೃಷ್ಣ ಭಟ್ ಉಪಸ್ಥಿತಿಯಲ್ಲಿ ಉದ್ಘಾಟನೆಗೊಳ್ಳಲಿದೆ. ಬೆಳಿಗ್ಗೆ ದಕ್ಷಯಜ್ಞ, ವಿಶ್ವೇಶ್ವರ ಸಾಕ್ಷತ್ಕಾರ, ಪಾರ್ಥನಿಗೆ ಪಾಶುಪತಾಸ್ತ್ರ ಪ್ರದಾನ, ಕೋಳೂರ ಕೊಡಗೂಸು, ಗಣಪತಿಯಿಂದ ಆತ್ಮಲಿಂಗ ಪ್ರತಿಷ್ಟೆ, ಮಂಜುನಾಥ ವೈಭವ, ಗಿರಿಜಾ ಕಲ್ಯಾಣ ಆಖ್ಯಾನಗಳು ನಡೆಯಲಿದ್ದು, ಡಾ. ಕೃಷ್ಣ ಭಟ್ ಸುಣ್ಣಂಗುಳಿ, ರಾಜಾರಾಮ ಹೊಳ್ಳ, ತೋನ್ಸೆ ಪುಷ್ಕಳ ಕುಮಾರ, ಶ್ರದ್ಧಾ ನಾಯರ್ಪಳ್ಳ, ಮೇಧಾ ಉಜಿರೆ, ರಘುಪತಿ ಭಟ್ಟ, ಡಾ. ಸಂತೋಷ ಆಳ್ವ, ಸುರೇಶ್ ಕುದ್ರೆತ್ತಾಯ, ಶುಭಕರ ತಲಪಾಡಿ, ವೆಂಕಟರಮಣ ಭಟ್, ಸದಾಶಿವ ಆಳ್ವ ತಲಪಾಡಿ, ಸರ್ಪಂಗಳ ಈಶ್ವರ ಭಟ್ ಮುಂತಾದವರು ವಾಚನ, ಆಖ್ಯಾನದಲ್ಲಿ ಭಾಗವಹಿಸಲಿದ್ದಾರೆಂದು ಸಂಘಟಕ ಗಮಕಿ ಸುರೇಶ್ ರಾವ್ ಅತ್ತೂರು ತಿಳಿಸಿದ್ದಾರೆ.