-->


ಮಾ.8: ಮೂಡಬಿದ್ರೆ ಅಶ್ವತ್ಥಪುರದ ಲೆಕ್ಸಾ ವ್ಯಾಲಿಯಲ್ಲಿ ಲಯನ್ ಜಿಲ್ಲೆ 317ಡಿ ಪ್ರಾಂತ್ಯ 11ರ ಪ್ರಾಂತೀಯ ಸಮ್ಮೇಳನ "ಉನ್ನತಿ"

ಮಾ.8: ಮೂಡಬಿದ್ರೆ ಅಶ್ವತ್ಥಪುರದ ಲೆಕ್ಸಾ ವ್ಯಾಲಿಯಲ್ಲಿ ಲಯನ್ ಜಿಲ್ಲೆ 317ಡಿ ಪ್ರಾಂತ್ಯ 11ರ ಪ್ರಾಂತೀಯ ಸಮ್ಮೇಳನ "ಉನ್ನತಿ"

ಮುಲ್ಕಿ:"ವಿ ಸರ್ವ್"ಎನ್ನುವ ಧ್ಯೇಯದೊಂದಿಗೆ  ಜಾಗತಿಕ ಮಟ್ಟದಲ್ಲಿ ಮೇರು ಸೇವಾ ಸಂಸ್ಥೆಯಾದ ಲಯನ್ಸ್ ಇಂಟರ್ನ್ಯಾಷನಲ್ ನ ಅಂಗವಾದ ಲಯನ್ಸ್ ಜಿಲ್ಲೆ 317ಡಿ  ಪ್ರಸಕ್ತ ವರ್ಷದ  ಜಿಲ್ಲಾ ಗವರ್ನರ್ ,ಏಂಜೆಲ್  ಆಫ್ ಸರ್ವಿಸ್ ಎಂದೇ ಖ್ಯಾತರಾದ  ಲಯನ್ ಭಾರತಿ ಬಿ.ಎಮ್  ಅವರ ನಾಯಕತ್ವದಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದು, ಇಂತಹ ಸದೃಡ  ಪ್ರಾಂತ್ಯದ ಪ್ರಸಕ್ತ ಸಾಲಿನ  ಪ್ರಾಂತೀಯ ಸಮ್ಮೇಳನ "ಉನ್ನತಿ' ಯು ಮಾ.8 ಶನಿವಾರ ಮೂಡಬಿದ್ರೆ ಅಶ್ವತ್ಥಪುರದ ಲೆಕ್ಸಾ ವ್ಯಾಲಿಯಲ್ಲಿ ಪ್ರಾಂತೀಯ ಅಧ್ಯಕ್ಷರಾದ ಲ ವೆಂಕಟೇಶ್ ಹೆಬ್ಬಾರ್ ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಲ. ವೆಂಕಟೇಶ್ ಹೆಬ್ಬಾ‌ರ್ ಹೇಳಿದರು ಅವರು  ಬುಧವಾರದಂದು ಮೂಲ್ಕಿಯ ಪುನರೂರು ಟೂರಿಸ್ಟ್ ಹೋಮ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿಯನ್ನು  ನೀಡಿದರು. ಸಮ್ಮೇಳನವು ''ಉನ್ನತಿ" ಎಂಬ ಹೆಸರಿನೊಂದಿಗೆ   ಇಲ್ಲಿಸೇವೆಗಿಲ್ಲ ಮಿತಿ ತೋರಿ ಎಲ್ಲರಿಗೂ ಪ್ರೀತಿ ಎಂಬ ಧ್ಯೇಯ ವಾಕ್ಯವನ್ನು ಹೊಂದಿ  ವಿಭಿನ್ನ ಮತ್ತು ವಿನೂತನ ರೀತಿಯಲ್ಲಿ ಮೇಳೈಸಲಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡೈಜಿ ವರ್ಲ್ಡ್ ಮುಖ್ಯಸ್ಥರಾದ ವಾಲ್ಟ‌ರ್ ನಂದಳಿಕೆ, ಮೂಡಬಿದ್ರೆಯ ಪೊಲೀಸ್ ಇನ್ಸೆಕ್ಟರ್ ಸಂದೇಶ್ ಪಿಜಿ ಉಪಸ್ಥಿತಲಿದ್ದಾರೆ.
 ಯಕ್ಷಗಾನ ರಂಗದ ಮೇರು ಭಾಗವತ ಪಟ್ಲ ಪೌಂಡೇಶನ್ ಸ್ಥಾಪಕ ಸತೀಶ್ ಶೆಟ್ಟಿ ಪಟ್ಲ, ದೀನ ದಲಿತರ ಆಶಾಕಿರಣ ಹೊಸ ಬೆಳಕು ಆಶ್ರಮದ  ಶ್ರೀಮತಿ ತನುಲ, ವೈಕಲ್ಯತೆಯನ್ನು ಮೀರಿ ಬೆಳೆದ ದೇಹದಾರ್ಡ್ಯ ಆಟೋ ಜಗದೀಶ್ ಪೂಜಾರಿ ರವರನ್ನು ವೇದಿಕೆಯಲ್ಲಿ  ಗೌರವಿಸಲಾಗುವುದು. ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಯ ಲಯನ್ಸ್ ಡಯಲಿಸಿಸ್‌ ಕೇಂದ್ರಕ್ಕೆ ಲಕ್ಷಕ್ಕೂ ಮೀರಿದ ಆರ್ಥಿಕ ನೆರವಿನ ಘೋಷಣೆ ಸೇರಿದಂತೆ ಹಲವಾರು ಸೇವಾ ಕಾರ್ಯಕ್ರಮಗಳು ಸಮ್ಮೇಳನದಲ್ಲಿ ನಡೆಯಲಿದೆ ಎಂದರು. ಲ. ಶಿವಪ್ರಸಾದ್ ಬಿ ರವರ ಅಧ್ಯಕ್ಷತೆಯಲ್ಲಿ  ಮುನ್ನಡೆಯುತ್ತಿರುವ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸಾಯರ್ ಆತಿಥ್ಯದಲ್ಲಿ ನಡೆಯಲಿರುವ ಲಯನ್ಸ್ ಜಿಲ್ಲೆ 317 ಡಿ ಯ ಪ್ರಾಂತ್ಯ ಹನ್ನೊಂದರ" ಉನ್ನತಿ" ಸಮ್ಮೇಳನದಲ್ಲಿ ಏಕಪ್ಲಾಸ್ಟಿಕ್‌ ನಿಷೇಧಕ್ಕೆ ಪ್ರಾಮುಖ್ಯತೆ ನೀಡಲಾಗಿದ್ದು ಸಮ್ಮೇಳನ ಯಶಸ್ವಿಗೆ ಎಲ್ಲರ ಸಹಕಾರ ಬೇಕು ಎಂದರು ಪತ್ರಿಕಾಗೋಷ್ಠಿಯಲ್ಲಿ ಪ್ರಾಂತ್ಯದ ಪ್ರಥಮ ಮಹಿಳೆ ಲ.ಪ್ರತಿಭಾ ಹೆಬ್ಬಾರ್, ಉನ್ನತಿ ಸಮ್ಮೇಳನ ಸಮಿತಿಯ ಅಧ್ಯಕ್ಷ ಲ ಒಸ್ವಾಲ್ಡ್‌ ಡಿಸೋಜಾ, ಪದಾಧಿಕಾರಿಗಳಾದ ಲ. ಶಿವಪ್ರಸಾದ್‌,ಲ.ಒಸ್ವಾಲ್ ಡಿಕೋಸ್ಟಾ, ಲ. ಪುಷ್ಪರಾಜ ಚೌಟ,ಲ.ಸುಧೀರ್ ಬಾಳಿಗ ಮತ್ತಿತರರು ಉಪಸ್ಥಿತರಿದ್ದರು ಒಸ್ವಾಲ್ ಡಿಸೋಜಾ, ಸ್ವಾಗತಿಸಿದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article