
ಮಾ.8:ಮುತ್ತೂರು ಗ್ರಾಮ ಪಂಚಾಯತ್ ನ ನೂತನ ಸಂಜೀವಿನಿ ಕಟ್ಟಡದ ಉದ್ಘಾಟನೆ
Wednesday, March 5, 2025
ಕೈಕಂಬ:ಮುತ್ತೂರು ಗ್ರಾಮ ಪಂಚಾಯತ್ ನ ನೂತನ ಸಂಜೀವಿನಿ ಕಟ್ಟಡದ ಉದ್ಘಾಟನೆಯು ಮಾ.8 ರಂದು ಮುತ್ತೂರು ಗ್ರಾಮ ಪಂಚಾಯತ್ ವಠಾರದಲ್ಲಿ ಬೆಳಿಗ್ಗೆನ11ಕ್ಕೆನಡೆಯಲಿದೆ.ದ.ಕ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡುರಾವ್ ಅವರು ನೂತನ ಸಂಜೀವಿನಿ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ.ಕಾರ್ಯಕ್ರಮದಲ್ಲಿ ವಿಧಾನಸಭಾಧ್ಯಕ್ಷ ಯು.ಟಿ ಖಾದರ್,ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಅಧಿಕಾರಿಗಳು,ಸಂಸದರು,ಶಾಸಕರುಗಳು ಉಪಸ್ಥಿತಲಿರುವರು.ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.